ತಾವರಗೇರಾ ಪ.ಪಂ ವತಿಯಿಂದ ಮತದಾನ ಜಾಗೃತಿ ಜಾಥಾ ಕಾರ್ಯಕ್ರಮ ನಡೆಯಿತು. ತಹಸೀಲ್ದಾರ ರವಿ ಅಂಗಡಿ, ಉಪ ತಹಸೀಲ್ದಾರ್ ಪ್ರಕಾಶ , ಮುಖ್ಯಾಧಿಕಾರಿ ನಬಿಸಾಬ , ಶರಣಪ್ಪ ದಾಸರ,ಸೂರ್ಯ ಕಾಂತ ,ಆಶಾ ರಾಠೋಡ, ರೇಣುಕಾ ,ಶಂಕ್ರಮ್ಮ ಇದ್ದರು. 
ಜಿಲ್ಲೆ

ಮತದಾನ ದಿನ ವೋಟ್ ಹಾಕಿ

Kopala - Desk - Eraveni

ತಾವರಗೇರಾ: ಮೇ7 ರಂದು ಎಲ್ಲರೂ ಕಡ್ಡಾಯವಾಗಿ ಮತದಾನ ಮಾಡಬೇಕು ಎಂದು ಕುಷ್ಟಗಿ ತಹಸೀಲ್ದಾರ್ ರವಿ ಅಂಗಡಿ ಹೇಳಿದರು.

ಜಿಲ್ಲಾ, ತಾಲೂಕು ಚುನಾವಣಾ ಕಾರ್ಯಾಲಯ, ತಾಲೂಕು ಮತ್ತು ಜಿಲ್ಲಾ ಸ್ವೀಪ್ ಸಮೀತಿ ಹಾಗೂ ಪಪಂ ಸಂಯೋಗದಲ್ಲಿ ಏರ್ಪಡಿಸಿದ್ದ ಮತದಾನ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಮಂಗಳವಾರ ಮಾತನಾಡಿದರು.

ಪಟ್ಟಣ ಪಂಚಾಯಿತಿ, ಹಳೇ ಬಜಾರ, ಪೊಲೀಸ್ ಠಾಣೆ ರಸ್ತೆ , ಡಾ.ಅಂಬೇಡ್ಕರ್ ವೃತ್ತ, ಹಳೇ ಬಸ್ ನಿಲ್ದಾಣದ ಬಸವೇಶ್ವರ ಸರ್ಕಲ್‌ಗಳಲ್ಲಿ ಜಾಗೃತಿ ಜಾಥಾ ನಡೆಯಿತು.

ಪ.ಪಂ.ಮುಖ್ಯಾಧಿಕಾರಿ ನಬಿಸಾಬ ಖುದನವರ, ಉಪ ತಹಸೀಲ್ದಾರ ಪ್ರಕಾಶ, ಕಂದಾಯ ನಿರೀಕ್ಷಕ ಶರಣಪ್ಪ ದಾಸರ್, ಸಾಗರ ಬೇರಿ, ಗ್ರಾಮ ಲೆಕ್ಕಿಗ ಸೂರ್ಯಕಾಂತ, ಕೃಷಿ ಇಲಾಖೆ ಅಧಿಕಾರಿ ಆಶಾ ರಾಠೋಡ ,ಪ.ಪಂ.ಸಿಬ್ಬಂದಿ ಶಾಮೂರ್ತಿ ಕಟ್ಟಿಮನಿ,

ಮರೇಶ , ಶರಣಬಸವ ಸೈಂದರ, ಅಬ್ದುಲ್ ಖಾದರ್, ರಾಘವೇಂದ್ರ , ಅಂತೋನಿ ರಾಜಾ, ಜೆಸ್ಕಾಂನ ಸಿಬ್ಬಂದಿ, ಆರೋಗ್ಯ ಇಲಖೆ ರೇಣುಕಾ, ಸೌಭಾಗ್ಯ, ಶಂಕ್ರಮ್ಮ, ಶಿಕ್ಷಣ ಇಲಾಖೆ ಡಿ.ಆರ್ ಪಾಟೀಲ, ಯಮನಪ್ಪ ಸಿರವಾರ, ಅಮರೇಶ ಚಲವಾದಿ ಇದ್ದರು.