More

    ಮತದಾನ ಹೆಚ್ಚಿಸಲು ಕೆ.ಜಿ.ಎಫ್ ವಿಧಾನಸಭಾ ಕ್ಷೇತ್ರದಲ್ಲಿ ನಿರಂತರ ಸ್ವೀಪ್ ಚಟುವಟಿಕೆಗಳು

    ವಿಜಯವಾಣಿ ಸುದ್ದಿಜಾಲ ಕೆ.ಜಿ.ಎಫ್.
    ಕೆ.ಜಿ.ಎಫ್. ವಿಧಾನಸಭಾ ಕ್ಷೇತ್ರ ಅತಿ ಹೆಚ್ಚು ಕಾರ್ಮಿಕರನ್ನು ಹೊಂದಿದೆ. ಭಾರತ ಸರ್ಕಾರದ ಸ್ವಾಮ್ಯದ ಬಿ.ಇ.ಎಂ.ಎಲ್ ಕಾರ್ಖಾನೆ ಕಾರ್ಯನಿರ್ವಹಿಸುತ್ತಿದ್ದು, ಈ ಕಾರ್ಖಾನೆಯಲ್ಲಿ ಸಾವಿರಾರರು ಮಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರತಿನಿತ್ಯ ಬೆಂಗಳೂರಿಗೆ ಸಾವಿರಾರು ಮಂದಿ ಕಾರ್ಮಿಕರು ಖಾಸಗಿ ಕಂಪನಿಗಳು ಮತ್ತು ಕಛೇರಿಗಳಲ್ಲಿ ಕಾರ್ಯನಿರ್ವಹಿಸಲು ಪ್ರಯಾಣ ಮಾಡುತ್ತಾರೆ. ಹಿಂದಿನ ವಿಧಾನಸಭಾ ಮತ್ತು ಲೋಕಸಭಾ ಚುನಾವಣಾ ಅಂಕಿಅAಶಗಳನ್ನು ಗಮನಿಸಿದಾಗ ಎಂಬತ್ತಕ್ಕೂ ಹೆಚ್ಚು ಮತಗಟ್ಟೆಗಳಲ್ಲಿ ಕಡಿಮೆ ಪ್ರಮಾಣದ ಮತದಾನವಾಗಿದೆ.
    ಈ ಹಿನ್ನೆಲೆಯಲ್ಲಿ ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ ಮತದಾನ ಹೆಚ್ಚಿಸಲು ಸ್ವೀಪ್ ಸಮಿತಿಯಿಂದ ನಿರಂತರವಾಗಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಮಹಿಳೆಯರಿಗೆ ರಂಗೋಲಿ ಸ್ಪರ್ಧೆ, ಬೈಕ್ ರ‍್ಯಾಲಿ, ಆಟೋರಿಕ್ಷಾ ಚಾಲಕರಿಗೆ ಮತದಾನದ ಬಗ್ಗೆ ಜಾಗೃತಿ ಮೂಡಿಸಲಾಯಿತು.

    ಯುವಕರು ಮತದಾನದಲ್ಲಿ ಭಾಗವಹಿಸಲು ಪ್ರೇರೇಪಿಸಲು ಕೆ.ಜಿ.ಎಫ್‌ನ ಜೈನ್ ಕಾಲೇಜಿನ ಮಾದರಿ ಮತಗಟ್ಟೆಯನ್ನು ನಿರ್ಮಿಸಿ ಅರಿವು ಮೂಡಿಸಲಾಯಿತು. ಒಂದು ಮತಗಟ್ಟೆ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ವಿದ್ಯಾರ್ಥಿಗಳಿಗೆ ವಿವರಿಸಲಾಯಿತು. ಶಾಲಾ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ವಿವಿಧ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿತ್ತು.

    ಸ್ವೀಪ್ ಸಮಿತಿಯಿಂದ ಫ್ಯಾಷನ್ ಶೋ ಏರ್ಪಡಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಯುವತಿಯರು ಪಾಲ್ಗೊಂಡಿದ್ದರು. ಮೊದಲ ಬಾರಿಗೆ ಮತದಾರರಾಗಿರುವ ಯುವಕರು ಮತದಾನದಲ್ಲಿ ಪಾಲ್ಗೊಳ್ಳಲು ಪ್ರೇರೇಪಿಸುವ ಉದ್ದೇಶದಿಂದ ಫ್ಯಾಷನ್ ಶೋ ಏರ್ಪಡಿಸಲಾಗಿತ್ತು. ಜಿಲ್ಲಾ ಚುನಾವಣಾ ಐಕಾನ್ ಆಗಿರುವ ಅಂತಾ ರಾಷ್ಟಿçÃಯ ದೇಹಧಾರ್ಢ್ಯಪಟು ಎ.ವಿ. ರವಿ, ಕ್ರೀಡಾಪಟು ನಾಗೇಶ್, ಜಿಲ್ಲಾ ಸ್ವೀಪ್ ಸಮಿತಿಯ ಅಧ್ಯಕ್ಷೆ ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪದ್ಮಬಸವಂತಪ್ಪ, ಕೆ.ಜಿ.ಎಫ್. ಸಹಾಯಕ ಚುನಾವಣಾಧಿಕಾರಿ ಸೋಮಶೇಖರ್, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಮಂಜುನಾಥ್, ಕೆ.ಜಿ.ಎಫ್ ನಗರಸಭೆಯ ಆಯುಕ್ತ ಪವನ್ ಭಾಗವಹಿಸಿದ್ದರು.

    ಕೆ.ಜಿ.ಎಫ್. ನಗರಸಭೆಯ ವಿವಿಧ ವಾರ್ಡುಗಳಲ್ಲಿ ಪ್ರತಿನಿತ್ಯ ವಾಹನಗಳ ಮೂಲಕ ಕಸ ಸಂಗ್ರಹಣೆ ಮಾಡಲಾಗುತ್ತಿದೆ. ಈ ವಾಹನಗಳಲ್ಲಿ ಚುನಾವಣೆಯ ಬಗ್ಗೆ ಸಂದೇಶ ಸಾರುವ ಹಾಡನ್ನು ಪ್ರತಿನಿತ್ಯ ಬಿತ್ತರಿಸಲಾಯಿತು. ಈ ಬಾರಿ ಮತದಾನದ ಪ್ರಮಾಣ ಹೆಚ್ಚಲಿದೆ. ಜಿಲ್ಲಾ ಸ್ವೀಪ್ ಸಮಿತಿಯ ಆಶ್ರಯದಲ್ಲಿ ನಾವು ನಿರಂತರವಾಗಿ ಹಲವಾರು ಮತದಾರರ ಮೇಲೆ ಪರಿಣಾಮ ಬೀರುವ ಕಾರ್ಯಕ್ರಮಗಳನ್ನು ನಡೆಸಿದ್ದೇವೆ ಎಂದು ನಗರಸಭೆಯ ಪೌರಾಯುಕ್ತ ಪವನ್ ತಿಳಿಸಿದ್ದಾರೆ.

    ಚಿತ್ರ ೨೩ ಕೆ.ಎಲ್.ಆರ್. ೦೨ : ಕೆ.ಜಿ.ಎಫ್. ನಗರದಲ್ಲಿ ರಂಗೋಲಿ ಬಿಡಿಸುವ ಮೂಲಕ ಮತದಾರರಲ್ಲಿ ಜಾಗೃತಿ ಮೂಡಿಸುತ್ತಿರುವ ಸಿ.ಇ.ಓ. ಪದ್ಮಬಸವಂತಪ್ಪ

    ಮತದಾನ ಹೆಚ್ಚಿಸಲು ಕೆ.ಜಿ.ಎಫ್ ವಿಧಾನಸಭಾ ಕ್ಷೇತ್ರದಲ್ಲಿ ನಿರಂತರ ಸ್ವೀಪ್ ಚಟುವಟಿಕೆಗಳು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts