ಜಿಲ್ಲೆ

ಕುಂಬಾರರ ಕುಂಭಾ ಸಮಾಗಮ : ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾಟ

ಸೌಮ್ಯ ಆರ್

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ

ಕುಂಬಾರರ ಸೇವಾ ಸಂಘ ಹಾಗೂ ಜೈ ಶ್ರೀರಾಮ್ ಗೆಳೆಯರ ಬಳಗ, ಶ್ರೀರಾಮನಗರ ಬಂದಾರು, ಧರ್ಮ ಸಂಸ್ಕಾರ ಶಿಕ್ಷಣ ಸಂಯುಕ್ತ ಆಶ್ರಯದಲ್ಲಿ ದ.ಕ ಜಿಲ್ಲಾ ಮಾಗಣೆ ಮಟ್ಟದ ಕುಂಬಾರರ ಬೃಹತ್ ಸಮಾವೇಶ ಕುಂಭಾ ಸಮಾಗಮ, ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾಟ ಮತ್ತು ವಿವಿಧ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಶ್ರೀ ರಾಮನಗರ ಶಿವಪ್ರಿಯ ಮೈದಾನದಲ್ಲಿ ನಡೆಯಿತು.

ರಾಜ್ಯ ಕುಂಬಾರರ ಮಹಾಸಂಘದ ಅಧ್ಯಕ್ಷ ಶಿವ ಕುಮಾರ ಚೌಡ ಶೆಟ್ಟಿ ಉದ್ಘಾಟಿಸಿದರು. ಬಂದಾರು ಕುಂಬಾರರ ಸೇವಾ ಸಂಘದ ಅಧ್ಯಕ್ಷ ಕೆಂಚಪ್ಪ ಕುಂಬಾರ ಅಧ್ಯಕ್ಷತೆ ವಹಿಸಿದ್ದರು. ವಿವೇಕಾನಂದ ಕಾಲೇಜು ಮುಂಡಾಜೆ ಹಾಗೂ ಬಂದಾರು ಪ್ರಾಥಮಿಕ ಶಾಲೆಯ ರಾಷ್ಟ್ರಮಟ್ಟದಲ್ಲಿ ಮಿಂಚಿದ ಕ್ರೀಡಾಪಟುಗಳಿಂದ ವಾಲಿಬಾಲ್ ಪಂದ್ಯಕೂಟ ನಡೆಯಿತು.

ಶಾಸಕ ಹರೀಶ್ ಪೂಂಜ, ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಬೊಟ್ಯಾಡಿ, ಉದ್ಯಮಿ ಕಿರಣ್ ಚಂದ್ರ ಡಿ.ಪುಷ್ಪಗಿರಿ, ಕರಾವಳಿ ಕುಂಬಾರರ ಯುವ ವೇದಿಕೆ ಮಂಗಳೂರು ಸ್ಥಾಪಕ ಅಧ್ಯಕ್ಷ ಡಾ.ಅಣ್ಣಯ್ಯ ಕುಲಾಲ್, ಬೆಳ್ತಂಗಡಿ ಕುಂಬಾರರ ಯಾನೆ ಮೂಲ್ಯರ ಸೇವಾ ಸಂಘದ ಅಧ್ಯಕ್ಷ ಹರೀಶ್ ಕಾರಿಂಜ, ನಿವೃತ್ತ ಕಂದಾಯ ಅಧಿಕಾರಿ ಪದ್ಮಕುಮಾರ್ ಎಚ್., ಬಂದಾರು ಗ್ರಾಪಂ ಅಧ್ಯಕ್ಷ ದಿನೇಶ್ ಗೌಡ ಖಂಡಿಗ, ಪುತ್ತೂರು ಕುಂಬಾರರ ಗುಡಿ ಕೈಗಾರಿಕೆ ಸಹಕಾರಿ ಸಂಘದ ಉಪಾಧ್ಯಕ್ಷ ದಾಮೋದರ ಕುಲಾಲ್, ಬಂದಾರು ಕೆರೆಮಜಲು ರವೀಂದ್ರ ಪಾಗಣ್ಣಾಯ, ಬೆಳ್ತಂಗಡಿ ಏಳು ಮಾಗಣೆ ಕುಂಬಾರ ಗುರಿಕಾರ ಪುಟ್ಟ, ಕುರಿಯಾಳ ಕೊಪ್ಪ ಶ್ರೀ ಲಕ್ಷ್ಮೀ ಜನಾರ್ದನ ದೇವಸ್ಥಾನ ಪ್ರಧಾನ ಕಾರ್ಯದರ್ಶಿ, ಐದು ಮಾಗಣೆ ಗುರಿಕಾರ ಗಂಗಾಧರ ಕುಂಬಾರ, ಬಂದಾರು ಶ್ರೀ ರಾಮ ನಗರ ಗುರಿಕಾರ ಬಾಬು ಕುಂಬಾರ, ಶೀನಪ್ಪ ಕುಂಬಾರ, ಬಂದಾರು ಕುಂಬಾರರ ಸೇವಾ ಸಂಘದ ಕಾರ್ಯದರ್ಶಿ ವಿಶ್ವನಾಥ ಕುಂಬಾರ ಶ್ರೀ ೀರಾಮನಗರ, ಜೈ ಶ್ರೀರಾಮ್ ಗೆಳೆಯರ ಬಳಗದ ಅಧ್ಯಕ್ಷ ಶ್ರೀಧರ ಬಿ.ಕೆ., ಕಾರ್ಯದರ್ಶಿ ಚಂದ್ರಶೇಖರ ಬಿ.ಕೆ, ಕ್ರೀಡಾಕೂಟದ ಕಾರ್ಯಾಧ್ಯಕ್ಷ ಉದಯ ಬಿ.ಕೆ, ಕಾರ್ಯದರ್ಶಿ ಪ್ರಕಾಶ್ ಬಿ.ಕೆ ಉಪಸ್ಥಿತರಿದ್ದರು. ಕ್ರೀಡಾಕೂಟ ಸಮಿತಿ ಕಾರ್ಯಧ್ಯಕ್ಷ ಉದಯ ಬಿ.ಕೆ ಸ್ವಾಗತಿಸಿದರು. ವಿಜಯ ಕಾಯರ್ತಡ್ಕ ಕಾರ್ಯಕ್ರಮ ನಿರೂಪಿಸಿದರು. ದೀಕ್ಷಾ ವಂದಿಸಿದರು.

ವಿವಿಧ ಕ್ಷೇತ್ರದಲ್ಲಿ ಸಾಧಕರಿಗೆ ಸನ್ಮಾನ

ದೈಹಿಕ ಶಿಕ್ಷಣ ಶಿಕ್ಷಕರಾದ ಪ್ರಶಾಂತ್ ಸುವರ್ಣ ಮರೋಡಿ, ಮೆಸ್ಕಾಂ ಇಲಾಖೆಯ ಸಂದೀಪ್ ಎಂ ಮಿತ್ತೂರು, ಯೋಗ ಶಿಕ್ಷಕ ಕುಶಾಲಪ್ಪ ಎಂ ನೆಕ್ಕರಾಜೆ, ನಿವೃತ್ತ ಸೈನಿಕ ರಮೇಶ್ ಕೊಂಕನೊಟ್ಟು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮೋಹನ್ ಬಂಗೇರ, ಬೆಳ್ತಂಗಡಿ ಸರ್ಕಾರಿ ಆಸ್ಪತ್ರೆ ಕಣ್ಣಿನ ತಜ್ಞ ವೈದ್ಯ ಡಾ.ರಮೇಶ್ ಬೆಳ್ತಂಗಡಿ, ರಾಜ್ಯಮಟ್ಟದ ಕ್ರೀಡಾಪಟು ತೇಜಸ್ವಿನಿ ಪೂಜಾರಿ ಬೊಲ್ಜೆ ಬಂದಾರು ಹಾಗೂ ಕುಂಬಾರ ಸಮಾಜದ ಸಾಧಕರು, ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡಿದ ಬಂದಾರು ಕುಂಬಾರ ಕ್ರೀಡಾ ಸಾಧಕರನ್ನು ಸನ್ಮಾನಿಸಲಾಯಿತು.