ಮೂಲ್ಕಿ: ಒಂಭತ್ತು ಮಾಗಣೆ ಕೊಲಕಾಡಿ ಶ್ರೀ ಕಾಳಿಕಾಂಬಾ ದೇವಸ್ಥಾನದ ಆಡಳಿತ ಮಂಡಳಿ ಹಾಗೂ ಜೀರ್ಣೋದ್ಧಾರ ಸಮಿತಿಯ ಸದಸ್ಯರು ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರನ್ನು ಭೇಟಿಯಾದರು.
ದೇವಸ್ಥಾನದ ಸಮಗ್ರ ಜೀರ್ಣೋದ್ಧಾರ ನಡೆಸುವ ಬಗ್ಗೆ ಆರ್ಥಿಕ ಸಹಕಾರ ನೀಡಲು ಮನವಿ ಸಲ್ಲಿಸಲಾಯಿತು. ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಕೆ.ಸುಬ್ರಾಯ ಆಚಾರ್ಯ, ಕಾರ್ಯಾಧ್ಯಕ್ಷ ಸುಧೀರ್ ಎಸ್, ಗೌರವ ಅಧ್ಯಕ್ಷ ಜಿ.ಟಿ.ಆಚಾರ್ಯ, ಉಪಾಧ್ಯಕ್ಷ ಪ್ರಶಾಂತ ಆಚಾರ್ಯ, ದೇವಳದ ಮೊಕ್ತೇಸರರಾದ ಮಾನಂಪಾಡಿ ಜಗದೀಶ್ ಆಚಾರ್ಯ, ಪಂಜಿನಡ್ಕ ಜಗದೀಶ್ ಆಚಾರ್ಯ, ಕಿಲ್ಪಾಡಿ ಸದಾಶಿವ ಆಚಾರ್ಯ, ಎಸ್‌ಕೆಜಿಐ ಕೋಆಪರೇಟಿವ್ ಸೊಸೈಟಿಯ ನಿರ್ದೇಶಕ ಮಂಜುನಾಥ ಆಚಾರ್ಯ ಅಳದಂಗಡಿ, ಇಂಜಿನಿಯರ್ ಯು. ಸುಂದರ್ ರಾಮ್ ಮಂಗಳೂರು ಉಪಸ್ಥಿತರಿದ್ದರು.