ಅಂಕೋಲಾ: ಹಿರಿಯ ಸಾಹಿತಿ ವಿಷ್ಣು ನಾಯಕರ ಸಾಹಿತ್ಯ ಸೇವೆಯೊಂದಿಗೆ ಕಳೆದ 50 ವರ್ಷಗಳ ಹಿಂದೆ ಹುಟ್ಟು ಹಾಕಿದ ರಾಘವೇಂದ್ರ ಪ್ರಕಾಶನದ ಮೂಲಕ ನಾಡಿನ ನೂರಾರು ಲೇಖಕರ ಕೃತಿಗಳನ್ನು ಪ್ರಕಟಿಸಿ ಪ್ರಕಾಶನದ ಹಿರಿಮೆಯನ್ನು ನಾಡಿನ ಉದ್ದಗಲಕ್ಕೂ ಪಸರಿಸಿದ್ದರು ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟಿ ಹೇಳಿದರು.
ಪಟ್ಟಣದ ಅಂಬಾರಕೊಡ್ಲದ ವಿಷ್ಣು ನಾಯ್ಕರ ಮನೆಯಂಗಳದ ಪರಿಮಳ ವೇದಿಕೆಯಲ್ಲಿ ಭಾನುವಾರ ರಾಘವೇಂದ್ರ ಪ್ರಕಾಶನದ ವತಿಯಿಂದ ಹಮ್ಮಿಕೊಂಡ ವಿಷ್ಣು ನಾಯ್ಕ ನೆನಪಿನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಸಾಹಿತಿ ವಿಷ್ಣು ನಾಯ್ಕರ ಕುಟುಂಬದವರು ನಮ್ಮ ಮನೆಯ ಸದಸ್ಯರಿದ್ದಂತೆ. ಸಮಾಜದಲ್ಲಿ ಉತ್ತಮ ವಾತಾವರಣವನ್ನು ಸೃಷ್ಟಿಸಬೇಕೆಂಬ ಸಂಕಲ್ಪದೊAದಿಗೆ ಕಟ್ಟಿ ಬೆಳೆಸಿದ ರಾಘವೇಂದ್ರ ಪ್ರಕಾಶನದ ಸದುದ್ದೇಶಗಳು ಮುಂದುವರಿಯಬೇಕೆಂಬುದು ಎಲ್ಲರ ಆಶಯವಾಗಿದೆ. ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾ ಗಿರುವ ವಿಷ್ಣು ನಾಯಕರ ಕುಟುಂಬದವರೆಲ್ಲರೂ ಸೇವೆಯೊಂದಿಗೆ ಅವ್ವಾ ಸಂಸ್ಥೆಯ ಮೂಲಕ ಸಾಂಕೇತಿಕವಾಗಿ ಒಂದು ಲಕ್ಷ ರೂಪಾಯಿಗಳನ್ನು ನೀಡಿ ಸಹಕರಿಸುವುದಾಗಿ ತಿಳಿಸಿದರು.
ಹಿರಿಯ ಸಾಹಿತಿ ಶಾಂತರಾಮ ನಾಯಕ್ ಹಿಚ್ಕಡ ಮಾತನಾಡಿ, ಸಾಹಿತಿ ಲೋಕದಲ್ಲಿ ಹೊಸ ಅಲೆಯನ್ನೇ ಸೃಷ್ಟಿಸಿದ ವಿಷ್ಣು ನಾಯ್ಕರು ನನ್ನೊಂದಿಗೆ ಆತ್ಮೀಯ ಒಡನಾಟ ಹೊಂದಿದ್ದರು. ವಿಷ್ಣು ನಾಯಕರ ರಾಘ ವೇಂದ್ರ ಪ್ರಕಾಶನದ ಮೂಲಕ ಯುವ ತಲೆಮಾರಿನ ಬರಹಗಾರರಿಗೆ ಬೆನ್ನೆಲುಬಾಗಿದ್ದರು. ಅವರು ನಮ್ಮಿಂದ ದೂರವಾಗಿದ್ದರು ರಾಘವೇಂದ್ರ ಪ್ರಕಾಶನದ ಮೂಲಕ ಅಜರಾಮರಾಗಿದ್ದಾರೆ ಎಂದರು.
ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಬಿ.ಎನ್.ವಾಸರೆ ಮಾತನಾಡಿ, ವಿಷ್ಣು ನಾಯ್ಕರು ಗುರುಗಳಾಗಿ ನನಗೆ ಮಾರ್ಗದರ್ಶನ, ಸಲಹೆ ಸೂಚನೆಗಳನ್ನು ನೀಡುತ್ತಿದ್ದರು ಎಂದರು.
ಶಿರಶಿ ಕಾಲೇಜು ಉಪನ್ಯಾಸಕ ಉಮೇಶ್ ನಾಯಕ್ ಮಾತನಾಡಿ ವಿಷ್ಣು ನಾಯಕರು ನಿಸ್ವಾರ್ಥವಾಗಿ ಸಾಹಿತ್ಯ ಸೇವೆ ನೀಡಿದ ಹಿರಿಮೆಗೆ ಪಾತ್ರರಾಗಿದ್ದಾರೆ. ಬದುಕನ್ನು ಸಾಹಿತ್ಯದ ಒಳಿತಿಗಾಗಿ ಕಳೆದ ವಿಷ್ಣು ನಾಯ್ಕರ ಆಶಯಗಳನ್ನು ನಾವೆಲ್ಲರೂ ಒಗ್ಗಟ್ಟಾಗಿ ಮುಂದುವರೆಸಿಕೊAಡ ಹೋಗುವುದಾಗಿ ಹೇಳಿದರು.
ಈ ಸಂದರ್ಭದಲ್ಲಿ ರಾಘವೇಂದ್ರ ಪ್ರಕಾಶನದ ವತಿಯಿಂದ ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧನೆ ತೋರಿದ ಅಂಬಾರಕೊಡ್ಲದ ಪೂರ್ಣಿಮಾ ನಾಗೇಶ ಗೌಡ ಮತ್ತು ಮಂಜಗುಣಿಯ ಅರ್ಪಿತಾ ಅಶೋಕ ನಾಯ್ಕ ವಿದ್ಯಾರ್ಥಿನಿಯರಿಗೆ ತಲಾ 5 ಸಾವಿರ ರೂಪಾಯಿಗಳ ನಗದು ನೀಡಿ ಸನ್ಮಾನಿಸಿ ಗೌರವಿಸಲಾಯಿತು.
ವಿಷ್ಣು ನಾಯಕ್ ಮಕ್ಕಳಾದ ಅಮಿತಾ ಮತ್ತು ಭಾರತಿ ಮಾತನಾಡಿ ರಾಜೇಂದ್ರ ಪ್ರಕಾಶನದ ಕಾರ್ಯವನ್ನು ಸಾಗಲು ಸುಸೂತ್ರವಾಗಿ ಸಾಗಲು ಸಹಕರಿಸಿದವರನ್ನು ಸ್ಮರಿಸಿಕೊಂಡರು. ಜೆ. ಪ್ರೇಮಾನಂದ ಹಿರಿಯ ಸಾಹಿತಿ ವಿಷ್ಣು ನಾಯ್ಕರೊಂದಿಗೆ ದಿನ ಒಡನಾಟದ ಕುರಿತು ಮಾತನಾಡಿದರು. ಕನ್ನಡ ಸಾಹಿತ್ಯ ಪರಿಷತ್ತು ಕಾರವಾರ ಘಟಕದ ಅಧ್ಯಕ್ಷ ರಾಮ ನಾಯ್ಕ ಸ್ವಾಗತಿಸಿದರು, ಉಪನ್ಯಾಸಕ ಉಮೇಶ್ ನಾಯ್ಕ ಪ್ರಾಸ್ತವಿ ಕವಾಗಿ ಮಾತನಾಡಿದರು. ನಿರೂಪಮಾ, ಕ್ಷಮಾ ನಾಯ್ಕ ನಿರ್ವಹಿಸಿದರು.