ಜಿಲ್ಲೆ

ಅಧ್ಯಕ್ಷರಾಗಿ ವೀರೇಂದ್ರ ಕುಮಾರ್ ಆಯ್ಕೆ: ಮಹತೋಭಾರ ಕಾರಿಂಜ ಶ್ರೀ ಕಾರಿಂಜೇಶ್ವರ ದೇವಸ್ಥಾನ

ಬಂಟ್ವಾಳ: ಮಹತೋಭಾರ ಕಾರಿಂಜ ಶ್ರೀ ಕಾರಿಂಜೇಶ್ವರ ದೇವಸ್ಥಾನದ ನೂತನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿ ಕಾವಳಪಡೂರು ಗ್ರಾ.ಪಂ.ಸದಸ್ಯ ವೀರೇಂದ್ರ ಕುಮಾರ್ ಅಮೀನ್ ಆಯ್ಕೆಯಾಗಿದ್ದಾರೆ.

ದೇಗುಲದ ಕಚೇರಿಯಲ್ಲಿ ಆಡಳಿತಾಧಿಕಾರಿ ಸಚಿನ್ ಕುಮಾರ್ ಅವರ ಅಧ್ಯಕ್ಷತೆಯಲ್ಲಿ ನಡೆದ ವ್ಯವಸ್ಥಾಪನಾ ಸಮಿತಿ ಸಭೆಯಲ್ಲಿ ಅವಿರೋಧವಾಗಿ ಆಯ್ಕೆ ನಡೆಯಿತು. ಪ್ರಧಾನ ಅರ್ಚಕರಾಗಿ ಮಿಥುನ್ ರಾಜ್ ನಾವಡ, ಸಮಿತಿಯ ಸದಸ್ಯರಾಗಿ ಪ್ರಶಾಂತ್, ರಾಧಾ ಆಚಾರ್ಯ, ಧನಲಕ್ಷ್ಮೀ ಸಿ.ಬಂಗೇರ, ಎಂ.ಉದಯ ನಾಯಕ್, ಪ್ರೇಮನಾಥ, ಜನಾರ್ದನ ಆಚಾರ್ಯ, ದಯಾನಂದ ಶೆಟ್ಟಿ ಅಮೈ ಅವರು ಆಯ್ಕೆಯಾಗಿದ್ದಾರೆ. ದೇಗುಲದ ಆಡಳಿತವನ್ನು ಆಡಳಿತಾಧಿಕಾರಿ ಅವರು ನೂತನ ಸಮಿತಿಗೆ ಹಸ್ತಾಂತರಿಸಿದರು. ಸಾರ್ವಜನಿಕರ ಪರವಾಗಿ ನೂತನ ಸಮಿತಿಯನ್ನು ಅಭಿನಂದಿಸಲಾಯಿತು.

ಪ್ರಮುಖರಾದ ಜಿ.ಪಂ.ಮಾಜಿ ಸದಸ್ಯ ಬಿ.ಪದ್ಮಶೇಖರ ಜೈನ್, ಬಾಲಕೃಷ್ಣ ಆಚಾರ್ಯ, ಪ್ರಭಾಕರ ಆಚಾರ್ಯ, ಬಾಲಕೃಷ್ಣ ಅಂಚನ್, ವಿಶ್ವನಾಥ ಪೂಜಾರಿ ಪೀರ್ಯಗುತ್ತು, ಸತೀಶ್ ಪಡಂತ್ರ್ಯಬೆಟ್ಟು, ರಾಜ್ ಪ್ರಸಾದ್ ಆರಿಗ, ಗೋಪಾಲ ಶೆಟ್ಟಿ ಕೆದ್ದಳಿಕೆ, ಕುಶಲ್ ಶೆಟ್ಟಿ ಕೆದ್ದಳಿಕೆ, ದಾಮೋದರ ಮನ್ಯಗುತ್ತು, ಉಮೇಶ್ ಪಡ್ಪು, ಲಿಂಗಪ್ಪ ಪೂಜಾರಿ ಕರ್ಮಾರ್, ದೇವಸ್ಥಾನದ ಮ್ಯಾನೇಜರ್ ವಿನಯ ಕುಮಾರ್ ಮತ್ತು ಸಿಬ್ಬಂದಿವರ್ಗ ಮತ್ತಿತರರು ಉಪಸ್ಥಿತರಿದ್ದರು.