ಸಿರವಾರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶನಿವಾರ ಏರ್ಪಡಿಸಿದ್ದ ಸಭೆಯಲ್ಲಿ ಜೆಸ್ಕಾಂ ಅಧಿಕಾರಿಯನ್ನು ಸಚಿವ ಎನ್.ಎಸ್. ಬೋಸರಾಜು ತರಾಟೆಗೆ ತೆಗದುಕೊಂಡರು. ಪ್ರಮುಖರಾದ ಶರಣಯ್ಯನಾಯಕ, ಬ್ರಿಜೇಶ್ ಪಾಟೀಲ್ ಇದ್ದರು. 
ಜಿಲ್ಲೆ

ವಿನಾಕಾರಣ ವಿದ್ಯುತ್ ಕಡಿತಗೊಳಿಸದಿರಿ

Kopala - Desk - Eraveni

ಮಾನ್ವಿ: ಸಿರವಾರ ಪಟ್ಟಣ ಮತ್ತು ತಾಲೂಕಿನಲ್ಲಿ ವಿದ್ಯುತ್ ಸಮಸ್ಯೆ ಹೆಚ್ಚಾಗುತ್ತಿದ್ದು, ಕೂಡಲೇ ಸರಿಪಡಿಸಿ ಸಾರ್ವಜನಿಕರಿಗೆ ರೈತರಿಗೆ ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕು ಎಂದು ಜೆಸ್ಕಾಂ ಅಧಿಕಾರಿ ಮೋಹನ್ ಸಿಂಗ್‌ಗೆ ಸಣ್ಣ ನೀರಾವರಿ ಸಚಿವ ಎನ್.ಎಸ್.ಬೋಸರಾಜು ಸೂಚಿಸಿದರು.

ಸಿರವಾರದ ಪ್ರವಾಸಿ ಮಂದಿರದಲ್ಲಿ ಶನಿವಾರ ಸಾರ್ವಜನಿಕರು ಮತ್ತು ರೈತರ ಅಹವಾಲು ಸ್ವೀಕರಿಸಿ ಮಾತನಾಡಿದರು. ಪ್ರತಿದಿನ ಆಗಾಗ್ಗೆ ವಿದ್ಯುತ್ ಕಡಿತಗೊಳಿಸುವುದರಿಂದ ಕೃಷಿ ಮತ್ತು ಕುಡಿವ ನೀರಿಗೆ ತೊಂದರೆಯಾಗಲಿದೆ. ವಿದ್ಯುತ್ ವ್ಯತ್ಯಯಗದಂತೆ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.

ಗ್ರಾಮೀಣ ಪ್ರದೇಶದಲ್ಲಿ ಪ್ರತಿದಿನ ನಾಲ್ಕೈದು ಗಂಟೆ ವಿದ್ಯುತ್ ತೆಗೆದರೆ ಕುಡಿವ ನೀರು, ದನಕರುಗಳಿಗೆ ಹಾಗೂ ಭತ್ತದ ಸಸಿ ಮಡಿಗಳಿಗೆ ನೀರು ಬಿಡಲು ಆಗುವುದಿಲ್ಲ ಎಂದು ರೈತರು ಅಳಲು ತೊಡಿಕೊಂಡರು. ಪಟ್ಟಣ ಸೇರಿ ಗ್ರಾಮೀಣ ಭಾಗದಲ್ಲಿರುವ ಸಣ್ಣಪುಟ್ಟ ವಿದ್ಯುತ್ ಸಮಸ್ಯೆಗಳಿದ್ದರೆ ಕೂಡಲೇ ಸರಿಪಡಿಸಬೇಕು. ಮುಂದಿನ ದಿನಗಳಲ್ಲಿ ವಿನಾಕಾರಣ ಪದೇಪದೆ ಕರೆಂಟ್ ತೆಗೆದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳಿಗೆ ಸಚಿವ ಬೋಸರಾಜು ಎಚ್ಚರಿಕೆ ನೀಡಿದರು.

ಪಪಂ ಅಧ್ಯಕ್ಷ ಭೂಪನಗೌಡ ಪಾಟೀಲ್, ಕಾಂಗ್ರೆಸ್ ಮುಖಂಡರಾದ ಚುಕ್ಕಿ ಸೂಗಪ್ಪ, ಶರಣಯ್ಯನಾಯಕ, ಬ್ರಿಜೇಶ್ ಪಾಟೀಲ್, ಪ್ರಮುಖರಾದ ಶಿವಾನಂದ ಚುಕ್ಕಿ, ಶಿವಕುಮಾರ ಅರಕೇರಿ, ಅಮರೇಗೌಡ ಹಂಚಿನಾಳ, ಬಸವರಾಜ ಪಾಟೀಲ್, ಮಹಿಳಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆ ರೇಣುಕಾ, ತಾಪಂ ಮಾಜಿ ಅಧ್ಯಕ್ಷ ದಾನಗೌಡ ಸಿರವಾರ, ಶಿವಮೂರ್ತಿ, ತಹಸೀಲ್ದಾರ್ ಅಶೋಕ ಪವಾರ್, ತಾಪಂ ಇಒ ಶಶಿಧರ ಸ್ವಾಮಿ, ಜೆಸ್ಕಾಂ ಅಧಿಕಾರಿ ಮೋಹನ್ ಸಿಂಗ್ ಇತರರಿದ್ದರು.