ಮುದ್ದಟ್ಟನೂರು ಗ್ರಾಪಂಯ ನೂತನವಾಗಿ ಆಯ್ಕೆಯಾದ ಅಧ್ಯಕ್ಷೆ ಕೆ.ಹುಲಿಗೆಮ್ಮ, ಉಪಾಧ್ಯಕ್ಷೆಯಾಗಿ ಎನ್.ಶಾರದಮ್ಮರನ್ನು ಸನ್ಮಾನಿಸಲಾಯಿತು. 
ಜಿಲ್ಲೆ

ಮುದ್ದಟ್ಟನೂರಿಗೆ ಅಧ್ಯಕ್ಷೆಯಾಗಿ ಕೆ.ಹುಲಿಗೆಮ್ಮ ಅವಿರೋಧ ಆಯ್ಕೆ

ಪ್ರವೀಣ ಉದುಸಾ ದಲಬಂಜನ್

ಸಿರಿಗೇರಿ: ಮುದ್ದಟ್ಟನೂರು ಗ್ರಾಮ ಪಂಚಾಯಿತಿಯ ನೂತನ ಅಧ್ಯಕ್ಷೆಯಾಗಿ ಮಾಳಾಪುರದ ಕೆ.ಹುಲಿಗೆಮ್ಮ(ಎಸ್ಸಿ), ಉಪಾಧ್ಯಕ್ಷೆಯಾಗಿ ಗುಂಡಿಗನೂರಿನ ಎನ್.ಶಾರದಮ್ಮ ಶೇಖಣ್ಣ (ಸಾಮಾನ್ಯ ಮಹಿಳೆ) ಅವಿರೋಧವಾಗಿ ಸೋಮವಾರ ಆಯ್ಕೆಯಾದರು.

ಅಧ್ಯಕ್ಷೆ ಎಸ್ಸಿ, ಉಪಾಧ್ಯಕ್ಷೆ ಸಾಮಾನ್ಯ ಮಹಿಳಾ ಮೀಸಲು

ಗ್ರಾಪಂ 21 ಸದಸ್ಯರನ್ನೊಳಗೊಂಡಿದೆ. ಅಧ್ಯಕ್ಷೆ ಸ್ಥಾನಕ್ಕೆ ಕೆ.ಹುಲಿಗೆಮ್ಮ ದುರುಗಪ್ಪ, ಉಪಾಧ್ಯಕ್ಷೆ ಸ್ಥಾನ ಎನ್.ಶಾರದಮ್ಮ ಶೇಖಣ್ಣ ಅವರು ಮಾತ್ರ ನಾಮಪತ್ರ ಸಲ್ಲಿಸಿದ್ದರು. ಹಾಗಾಗಿ ಚುನಾವಣಾಧಿಕಾರಿ ಕೃಷಿ ಸಹಾಯಕ ನಿರ್ದೇಶಕ ಅಧಿಕಾರಿ ಎಸ್.ಬಿ.ಪಾಟೀಲ್ ಅವಿರೋಧ ಆಯ್ಕೆಯಾಗಿದ್ದಾರೆ ಎಂದು ಘೋಷಿಸಿದರು. ನಂತರ ಅಧ್ಯಕ್ಷೆ,ಉಪಾಧ್ಯಕ್ಷೆ ಅವರನ್ನು ಗ್ರಾಪಂ ಸದಸ್ಯರನ್ನು ಸನ್ಮಾನಿಸಿದರು. ಪಂಚಾಯಿತಿ ರಾಜ್ ಇಲಾಖೆಯ ಪಿ.ಬಸವರಾಜ, ಪಿಡಿಒ ಬಸವರಾಜ್ ಇದ್ದರು.