More

    ಚುನಾವಣೆ ಮುಗೀತು, ಸರ್ಕಾರನೂ ರಚನೆಯಾಯ್ತು, ನಮ್ಮ ಬಾಡಿಗೆ ಹಣ ಕೊಡೋರ್ಯಾರು..?

    ಕಾರವಾರ: ವಿಧಾನಸಭೆ ಚುನಾವಣೆಗೆ ಕರ್ತವ್ಯಕ್ಕೆ ತಮ್ಮ ವಾಹನವನ್ನು ಬಾಡಿಗೆ ನೀಡಿದವರು ಈಗ ಹಣ ಪಡೆಯಲು ಕಚೇರಿಗಳಿಗೆ ಅಲೆಯುವಂತಾಗಿದೆ.
    ವಿಧಾನಸಭೆ ಚುನಾವಣೆಯಲ್ಲಿ ಆಗಮಿಸಿದ ಅರೆಸೇನಾ ಪಡೆಗಳ ಓಡಾಟಕ್ಕೆ ಮ್ಯಾಕ್ಸಿಕ್ಯಾಬ್ ಹಾಗೂ ಮೋಟರ್ ಕ್ಯಾಬ್ ಸೇರಿ ಒಟ್ಟು 8 ವಾಹನಗಳನ್ನು ಸುಮಾರು 1 ತಿಂಗಳ ಅವಽಗೆ ಬಾಡಿಗೆಗೆ ಪಡೆಯಲಾಗಿತ್ತು. ಕಾರವಾರ ಚುನಾವಣಾಧಿಕಾರಿಯಾಗಿರುವ ಎಸಿ ಅವರ ಸೂಚನೆಯ ಮೇರೆಗೆ ಕೊಟೇಶನ್ ಪಡೆದು, ಆರ್‌ಟಿಒ ವಾಹನಗಳನ್ನು ಬಾಡಿಗೆಗೆ ಪಡೆದು, ಎಸ್‌ಪಿ ಕಚೇರಿಗೆ ಒಪ್ಪಿಸಿದ್ದರು.
    ಮ್ಯಾಕ್ಸಿಕ್ಯಾಬ್‌ಗೆ ಪ್ರತಿ ದಿನಕ್ಕೆ 1300 ರೂ. ಹಾಗೂ ಮೋಟರ್ ಕ್ಯಾಬ್‌ಗೆ ಪ್ರತಿ ದಿನಕ್ಕೆ 1200 ರೂ. ಬಾಡಿಗೆ ಕೊಡುವುದಾಗಿ ತಿಳಿಸಲಾಗಿತ್ತು. ವಾಹನಗಳಿಗೆ ಡೀಸೆಲ್ ಇಲಾಖೆಯೇ ಭರಿಸಿತ್ತು.

    ಆದರೆ, ನಿಗದಿ ಮಾಡಿದ ಬಾಡಿಗೆ ಇದುವರೆಗೂ ಬಂದಿಲ್ಲ. ಕೇಳಲು ಹೋದರೆ, ನಮ್ಮನ್ನು ಒಂದೆಡೆಯಿAದ ಇನ್ನೊಂದೆಡೆಗೆ ಅಲೆಸಲಾಗುತ್ತಿದೆ ಎನ್ನುತ್ತಾರೆ ವಾಹನ ಮಾಲೀಕ ಚೇತನ ವಿಠೋಬ ನಾಯ್ಕ.

    ಇದನ್ನೂ ಓದಿ:ನಾಳೆಯೂ ಭಾರಿ ಮಳೆ ರೆಡ್‌ ಅಲರ್ಟ್‌-ಕೆಲ ತಾಲೂಕಿನ ಶಾಲೆಗಳಿಗೆ ರಜೆ
    `ಈಗ ವಾಹನ ಎಲ್ಲ ದಿನ ಓಡಾಡಿಲ್ಲ. ಇದರಿಂದ ಕಿಲೋಮೀಟರ್ ಲೆಕ್ಕದಲ್ಲಿ ಪ್ರತಿ ಕಿಮೀಗೆ 14 ರೂ.ನಂತೆ ನಿಮಗೆ ಬಾಡಿಗೆ ನೀಡುತ್ತೇವೆ ಎಂದು ಎಸಿ ಕಚೇರಿಯ ಅಧಿಕಾರಿಗಳು ಹೇಳುತ್ತಿದ್ದಾರೆ.

    ಇಂಧನದ ಖರ್ಚು ಇಲ್ಲದೇ ಇದ್ದರೂ ಚಾಲಕರನ್ನು ಎಲ್ಲ ದಿನ ಕರ್ತವ್ಯಕ್ಕೆ ನಿಯೋಜಿಸಿದ್ದೇವೆ. ಪ್ರತಿ ಚಾಲಕರಿಗೆ ಪ್ರತಿ ದಿನ 1 ಸಾವಿರ ರೂ. ಭತ್ಯೆಯನ್ನು ನಮ್ಮ ಕೈಯ್ಯಿಂದ ಪಾವತಿಸಿದ್ದೇವೆ.

    ಕಿಲೋ ಮೀಟರ್ ಲೆಕ್ಕದಲ್ಲಿ ಬಾಡಿಗೆ ನೀಡಿದರೆ, ನಮಗೇ ನಷ್ಟವಾಗುತ್ತದೆ. ಈಗಾಗಲೇ ಎರಡು ತಿಂಗಳು ಕಳೆದಿದ್ದು, ನಾವು ಸಂಕಷ್ಟದಲ್ಲಿದ್ದೇವೆ ಎನ್ನುತ್ತಾರೆ ವಾಹನ ಮಾಲೀಕರು.

    ಈ ಕಾರಣಕ್ಕೆ ವಾಹನ ಮಾಲೀಕರು ಜಿಲ್ಲಾಽಕಾರಿ ಪ್ರಭುಲಿಂಗ ಕವಳಿಕಟ್ಟಿ ಅವರ ಬಳಿ ತಮ್ಮ ದೂರು ಹೇಳಿಕೊಂಡರು. ಅವರು ಎರಡು ದಿನದಲ್ಲಿ ಆರ್‌ಟಿಒ ಅವರನ್ನು ಕರೆಸಿ ಸಭೆ ನಡೆಸಿ, ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts