ಜಿಲ್ಲೆ

ಉಗ್ರರ ವಿರುದ್ಧ ಸೇನಾ ಕಾರ್ಯಾಚರಣೆ: ಪುಲ್ವಾಮದಲ್ಲಿ ವಿಜಯಪುರ ಮೂಲದ ಯೋಧ ಹುತಾತ್ಮ

ವಿಜಯಪುರ: ಪುಲ್ವಾಮದಲ್ಲಿ ಉಗ್ರಗಾಮಿಗಳ ಹಾಗೂ ಸೇನೆಯ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಜಿಲ್ಲೆಯ ಯೋಧ ಹುತಾತ್ಮನಾಗಿದ್ದಾನೆ.

ಹುತಾತ್ಮನಾದ ಯೋಧನನ್ನು ಕಾಶೀರಾಯ ಬೊಮ್ಮನಹಳ್ಳಿ(35) ಎಂದು ಗುರುತಿಸಲಾಗಿದೆ. ಬಸವನ ಬಾಗೇವಾಡಿ ತಾಲೂಕಿನ ಉಕ್ಕಲಿ ಗ್ರಾಮದ ಯೋಧನಾಗಿದ್ದಾನೆ. ಸೇನಾಧಿಕಾರಿಗಳಿಂದ ಯೋಧ ಕಾಶೀರಾಯ ಹುತಾತ್ಮನಾದ ಮಾಹಿತಿ ಬಂದಿದ್ದು, ಗ್ರಾಮದಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ.

ನಾಳೆ ಹುತಾತ್ಮ ಯೋಧ ಕಾಶೀರಾಯನ ಪಾರ್ಥೀವ ಶರೀರ ಸ್ವಗ್ರಾಮ ಉಕ್ಕಲಿ ತಲುಪುವ ನಿರೀಕ್ಷೆ ಇದ್ದು, ನಂತರ ಸರ್ಕಾರಿ ಸಕಲ ಗೌರವಗಳೊಂದಿಗೆ ಹುತಾತ್ಮ ಯೋಧನ ಅಂತ್ಯಕ್ರಿಯೆ ನಡೆಯಲಿದೆ. ತಂದೆ, ತಾಯಿ, ಪತ್ನಿ, ಓರ್ವ ಗಂಡು ಮಗು, ಓರ್ವ ಹೆಣ್ಣು ಮಗು ಹಾಗೂ ಇಬ್ಬರು ಸಹೋದರರನ್ನು ಯೋಧ ಅಗಲಿದ್ದಾರೆ. (ದಿಗ್ವಿಜಯ ನ್ಯೂಸ್​)