ಜಿಲ್ಲೆ

ವಿಜಯಪುರ-ಸೊಲಾಪುರ ಹೈವೆ ಲಿಮ್ಕಾ ಬುಕ್ ಆಫ್ ರೆಕಾರ್ಡ್‌ಗೆ ಸೇರ್ಪಡೆ

ವಿಜಯಪುರ: ಕರ್ನಾಟಕ-ಮಹಾರಾಷ್ಟ್ರದ ಸಂಪರ್ಕ ಸೇತುವೆಯಾದ ವಿಜಯಪುರ-ಸೋಲಾಪುರ ರಸ್ತೆ ಕಾಮಗಾರಿ ಇದೀಗ ಲಿಮ್ಕಾ ಬುಕ್ ಆಫ್ ರೆಕಾರ್ಡ್‌ಗೆ ಸೇರ್ಪಡೆಯಾಗಿದೆ.

ಈ ಬಗ್ಗೆ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಟ್ವೀಟ್ ಮಾಡಿದ್ದು, ನ್ಯಾಶನಲ್ ಹೈವೇಸ್ ಅಥಾರಿಟಿ ಆಫ್ ಇಂಡಿಯಾ-ಎನ್‌ಎಚ್‌ಎಐ ಈಚೆಗೆ 18 ಗಂಟೆಗಳಲ್ಲಿ 25.54 ಕಿಮೀ ರಸ್ತೆ ಪೂರ್ಣಗೊಳಿಸುವ ಮೂಲಕ ದಾಖಲೆ ಬರೆದಿದೆ ಎಂದಿದ್ದಾರೆ.

500 ಗುತ್ತಿಗೆದಾರರು ಹಾಗೂ ನೌಕರರು ಸೇರಿ ಚತುಷ್ಪಥ ಹೆದ್ದಾರಿಯ ಈ ಒಂದು ಮಾರ್ಗವನ್ನು ನಿರ್ಮಿಸಿದ್ದಾರೆ. ಅದಕ್ಕಾಗಿ ಯೋಜನಾ ನಿರ್ದೇಶಕರು, ಅಧಿಕಾರಿಗಳು ಹಾಗೂ ಗುತ್ತಿಗೆದಾರರಿಗೆ ಅಭಿನಂದಿಸುವುದಾಗಿ ತಿಳಿಸಿದ್ದಲ್ಲದೇ ಪ್ರಸ್ತುತ 110 ಕಿಮೀ ಸೋಲಾಪುರ-ವಿಜಯಪುರ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆದಿದ್ದು ಅಕ್ಟೋಬರ್ 2021 ರೊಳಗೆ ಕಾಮಗಾರಿ ಪೂರ್ಣಗೊಳಿಸುವುದಾಗಿ ತಿಳಿಸಿದ್ದಾರೆ.