ತೆಕ್ಕಟ್ಟೆ ಸೇವಾ ಸಂಗಮ ವಿದ್ಯಾ ಕೇಂದ್ರದಲ್ಲಿ ವಿಜ್ಞಾನ ಮೇಳ, ಗಣಿತ, ಯೋಗ, ಸಂಸ್ಕೃತಿ ಜ್ಞಾನ ಮಹೋತ್ಸವದಲ್ಲಿ ಮೊಬೈಲ್ ಚಾರ್ಜರ್ ವಿಜ್ಞಾನ ಮಾದರಿಗೆ ಕುಂದಾಪುರ ಕ್ಷೇತ್ರ ಶಿಕ್ಷಣಾಧಿಕಾರಿ ಶೋಭಾ ಶೆಟ್ಟಿ ಚಾಲನೆ ನೀಡಿದರು 
ಜಿಲ್ಲೆ

ಸಂಸ್ಕೃತಿ ಜ್ಞಾನದೊಂದಿಗೆ ಪೂರಕ ಶಿಕ್ಷಣ

ಇಂದಿರಾ ಎನ್ ಕೆ

ಕೋಟ: ಇಂದಿನ ಸ್ಪರ್ಧೆ ವಿಶಿಷ್ಟವಾದದ್ದು, ಸಂಸ್ಕೃತಿ, ನಡೆ-ನುಡಿಯ ಜ್ಞಾನದೊಂದಿಗೆ ಪಠ್ಯೇತರ ಪೂರಕವಾಗಿ ನಡೆಯುತ್ತಿದೆ ಎಂದು ಕುಂದಾಪುರ ಕ್ಷೇತ್ರ ಶಿಕ್ಷಣಾಧಿಕಾರಿ ಶೋಭಾ ಶೆಟ್ಟಿ ಹೇಳಿದರು.

ಸೇವಾ ಸಂಗಮ ವಿದ್ಯಾಕೇಂದ್ರ ವಿದ್ಯಾಗಿರಿ ತೆಕ್ಕಟ್ಟೆಯಲ್ಲಿ ವಿದ್ಯಾಭಾರತಿ ಕರ್ನಾಟಕ ಉಡುಪಿ ಜಿಲ್ಲೆಗೆ ಸಂಲಗ್ನಗೊಂಡ ಶಾಲೆಗಳಿಗೆ ವಿಜ್ಞಾನ ಮೇಳ, ಗಣಿತ, ಯೋಗ, ಸಂಸ್ಕೃತಿ ಜ್ಞಾನ ಮಹೋತ್ಸವ ಶಿಶುವರ್ಗ, ಬಾಲವರ್ಗದ ವಿದ್ಯಾರ್ಥಿಗಳಿಗೆ ಮೂರು ವರ್ಗದಲ್ಲಿ ನಡೆಸುವ ಕಾರ್ಯಕ್ರಮದಲ್ಲಿ ಮಾತನಾಡಿದರು.

6ನೇ ತರಗತಿ ವಿದ್ಯಾರ್ಥಿನಿ ಸಾನಿಧ್ಯ ತಯಾರಿಸಿದ ಮೊಬೈಲ್ ಚಾರ್ಜರ್ ವಿಜ್ಞಾನ ಮಾದರಿಗೆ ಚಾಲನೆ ನೀಡಲಾಯಿತು.
ವಿದ್ಯಾಭಾರತಿ ಕರ್ನಾಟಕ ಉಡುಪಿ ಜಿಲ್ಲಾ ಅಧ್ಯಕ್ಷ ಪಾಂಡುರಂಗ ಪೈ, ಆಡಳಿತ ಮಂಡಳಿ ಅಧ್ಯಕ್ಷ ಸುರೇಶ್ ಬೆಟ್ಟಿನ್ ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕಿ ಸಂಧ್ಯಾ ಭಟ್ ಸ್ವಾಗತಿಸಿದರು. ವಿದ್ಯಾಭಾರತಿ ಕರ್ನಾಟಕ ಉಡುಪಿ ಜಿಲ್ಲಾ ಘಟಕ ಕಾರ್ಯದರ್ಶಿ ಮಹೇಶ್ ಹೈಕಾಡಿ ಪ್ರಸ್ತಾನವೆ ನಡೆಸಿಕೊಟ್ಟರು. ಗಣಿತ ಪ್ರಮುಖ ಜ್ಯೋತಿ ಅಡಿಗ ಕಾರ್ಯಕ್ರಮ ವಂದಿಸಿದರು.