ಹೆಬ್ರಿ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ವಿಜಯವಾಣಿ ವಿದ್ಯಾರ್ಥಿ ಉದ್ಯೋಗ ಮಿತ್ರವನ್ನು ವಿತರಿಸಲಾಯಿತು.  
ಜಿಲ್ಲೆ

‘ವಿದ್ಯಾರ್ಥಿಮಿತ್ರ’ ಮ್ಕಕಳಿಗೆ ದಾರಿದೀಪ

ಇಂದಿರಾ ಎನ್ ಕೆ

ಹೆಬ್ರಿ: ಸ್ಪರ್ಧಾತ್ಮಕ ಯುಗದಲ್ಲಿ ಬಹಳಷ್ಟು ಸ್ಪರ್ಧೆ ಇರುವುದರಿಂದ ವಿಜಯವಾಣಿ ವಿದ್ಯಾರ್ಥಿ ಉದ್ಯೋಗ ಮಿತ್ರ ಪಾಠದ ವಿಷಯಗಳೊಂದಿಗೆ ಸ್ಪರ್ಧಾತ್ಮಕ ಪರೀಕ್ಷೆ ತಯಾರಿಗೆ ದಾರಿದೀಪವಾಗಲಿದೆ ಎಂದು ಪಿಆರ್‌ಎನ್ ಅಮೃತ ಭಾರತಿ ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ರಾಜೇಶ್ ನಾಯಕ್ ಹೇಳಿದರು.

ಹೆಬ್ರಿ ಶಾಂತಿನಿಕೇತನ ಯುವವೃಂದ ಕುಡಿಬೈಲ್ ಕುಚ್ಚೂರು ನೇತೃತ್ವದಲ್ಲಿ ಶುಕ್ರವಾರ ಹೆಬ್ರಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲೆಗೆ ವಿಜಯವಾಣಿ ವಿದ್ಯಾರ್ಥಿ ಉದ್ಯೋಗಮಿತ್ರ ವಿತರಿಸಿ ಮಾತನಾಡಿದರು.

ವಿದ್ಯಾರ್ಥಿ ಶ್ರೇಯಸ್ಸಿಗೆ ಕಡಿಮೆ ದರದಲ್ಲಿ ಪ್ರಿಂಟ್ ಮಾಡಿ ನೀಡುತ್ತಿರುವುದು ಪತ್ರಿಕೆ ಸಾಮಾಜಿಕ ಬದ್ಧತೆ ಎತ್ತಿ ತೋರಿಸುತ್ತದೆ ಎಂದರು.
ಶಾಂತಿನಿಕೇತನ ಅಧ್ಯಕ್ಷ ದೀಕ್ಷಿತ್ ನಾಯಕ್ ಮಾತನಾಡಿ, ವರ್ಷಾಂತ್ಯದಲ್ಲಿ ವಿದ್ಯಾರ್ಥಿಮಿತ್ರದ ಪ್ರಯೋಜನ ಪಡೆದವರಿಗೆ ಪರೀಕ್ಷೆ ನಡೆಸಿ ಪ್ರಥಮ ಸ್ಥಾನ ಪಡೆದವರಿಗೆ ಆಕರ್ಷಕ ಬಹುಮಾನ ನೀಡಲಾಗುವುದು ಎಂದರು.

ಉಪ ಪ್ರಾಂಶುಪಾಲ ದಿವಾಕರ ಮರಕಾಲ, ಎಸ್‌ಡಿಎಂಸಿ ಅಧ್ಯಕ್ಷ ಸೀತಾನದಿ ವಿಜಯೇಂದ್ರ ಶೆಟ್ಟಿ, ವರದಿಗಾರ ನರೇಂದ್ರ ಎಸ್.ಮರಸಣಿಗೆ, ಅಧ್ಯಾಪಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ರಾಜೇಶ್ ನಾಯಕ್ ಅವರು ನಮ್ಮ ಶಾಲೆ ಕೀರ್ತಿ ಪತಾಕೆ ಮೇಲೆತ್ತರಕ್ಕೆ ಆರಿಸಿದ್ದಾರೆ. ಲಕ್ಷಾಂತರ ರೂ. ವೆಚ್ಚದಲ್ಲಿ ಶಾಲೆ ನವೀಕರಣ ಕೆಲಸದಲ್ಲಿ ನಿರಂತರವಾಗಿ ತೊಡಗಿಕೊಂಡು ಅಭಿವೃದ್ಧಿಗೆ ಪ್ರೋತ್ಸಾಹ ನೀಡುತ್ತಿದ್ದಾರೆ. ಇಂದು ವಿದ್ಯಾರ್ಥಿಮಿತ್ರ ನೀಡಿ ವಿದ್ಯಾರ್ಥಿಗಳ ಕಲಿಕಾ ಸಾಮರ್ಥ್ಯ ಹೆಚ್ಚಿಸಲು ಕಾರಣಿ ಕರ್ತರಾಗಿದ್ದಾರೆ. ಇದರ ಸದುಪಯೋಗ ಪಡಿಸಿಕೊಳ್ಳಿ.-ದಿವಾಕರ ಮರಕಾಲ ಉಪ ಪ್ರಾಂಶುಪಾಲ