ಜಿಲ್ಲೆ

VIDEO| ಮುಸ್ಲಿಮರ ಕೈಯಲ್ಲಿ ದೇಶದ್ರೋಹ ಕೆಲಸ ಮಾಡಿಸಿದ್ದಾರೆ!

ಬೆಂಗಳೂರು: ಡಿಜೆಹಳ್ಳಿ ಗಲಭೆಯನ್ನು ಗಮನಿಸಿದರೆ, ಬೆಂಗಳೂರಿನಲ್ಲಿ ಎಂದೂ ಈ ರೀತಿ ಪೂರ್ವಯೋಜಿತ ಗಲಭೆ ನಡೆದಿಲ್ಲ. ಶಾಸಕರ ಮನೆಯನ್ನೇ ಸುಟ್ಟು ಹಾಕಿದ್ದು ಇದೇ ಮೊದಲು. ಗಲಭೆ ಪ್ರಕರಣದ ಹಿನ್ನೆಲೆಯಲ್ಲಿ ರಾಜಕಾರಣ "ಕೈ"ವಾಡ ಇದೆ. ದಲಿತ ಶಾಸಕ ಪರ ನಿಲ್ಲಬೇಕಾದವರು ತಮಗೂ ಗಲಭೆಗೂ ಸಂಬಂಧ ಇಲ್ಲ ಎಂಬಂತೆ ಇದ್ದರು. ಮುಸ್ಲಿಮರ ಕೈಯಲ್ಲಿ ಅವರು ದೇಶದ್ರೋಹದ ಕೆಲಸ ಮಾಡಿಸಿದ್ದಾರೆ ಎಂದು ಸಚಿವ ಸುಧಾಕರ್ ನೇರ ಆರೋಪ ಮಾಡಿದ್ದಾರೆ.

ಇದಕ್ಕೂ ದೇಶದ್ರೋಹಕ್ಕೂ ಏನೂ ವ್ಯತ್ಯಾಸ ಕಂಡು ಬರುತ್ತಿಲ್ಲ. ಇಂತಹ ದೇಶದ್ರೋಹಿಗಳ ವಿರುದ್ಧ ಕಠಿಣ ಶಿಕ್ಷೆ ಜಾರಿಗೊಳಿಸಬೇಕು. ಭಾಗವಹಿಸಿದವರು ಯಾರು ಎನ್ನೋದು ಎಲ್ಲರಿಗೂ ಗೊತ್ತಾಗಿದೆ. ಕಾಂಗ್ರಸ್​ನವರು ಈಗ ತಾವು ಈ ಗಲಭೆಗೆ ಸಹಕಾರ ನೀಡಿಲ್ಲ ಎಂದು ಹೇಳಿದರೂ, ದಲಿತ ಶಾಸಕನ ಪರ ನಿಲ್ಲಲೇ ಇಲ್ಲ. ದಲಿತರ ಪರ ಎಂದು ಕಾಂಗ್ರೆಸ್ ನಾಯಕರು ಮೊಸಳೆ ಕಣ್ಣೀರು ಸುರಿಸುತ್ತಾರಷ್ಟೆ ಎಂದು ಸುದಾಕರ್ ಟೀಕಿಸಿದ್ದಾರೆ.

ಒಂದು ಫೇಸ್ ಬುಕ್ ಪೋಸ್ಟ್ ಕಂಡ ಕೂಡಲೇ ಎರಡ್ಮೂರು ಸಾವಿರ ಜನ ಹೋಗಿ ಶಾಸಕನ ಮನೆಗೆ ಬೆಂಕಿ ಹಚ್ಚಿ ಅಂತ ಹೇಳ್ಕೊಡ್ತಾರಾ? ಇಂಥವರು ಅಧ್ಯಕ್ಷರಾದರೆ ಏನಾಗುವುದೋ ದೇವರೇ ಬಲ್ಲ ಎಂದು ಸುಧಾಕರ್ ಹೇಳಿದ್ದು ಅವರ ಹೇಳಿಕೆ ಪೂರ್ಣ ಪಾಠಕ್ಕೆ ಮೇಲಿನ ವಿಡಿಯೋ ಕ್ಲಿಕ್ಕಿಸಿ.