ಬೆಳ್ತಂಗಡಿ: ವೇಣೂರು ಸಬ್‌ಸ್ಟೇಷನ್‌ಗೆ ಎರಡು ವಿದ್ಯುತ್ ಫೀಡರ್‌ಗಳಿದ್ದು, ಕಳೆದ ಬಾರಿ ಒಂದು ಫೀಡರನ್ನು 5 ಮೆಗಾವಾಟ್‌ನಿಂದ 8 ಮೆಗಾವಾಟ್‌ಗೆ ಪರಿವರ್ತಿಸಲಾಗಿತ್ತು. ಈಗ ಆಗಾಗ ವಿದ್ಯುತ್ ಕಡಿತವಾಗುವುದರಿಂದ ಬಾಕಿ ಇರುವ ವಿದ್ಯುತ್ ಫೀಡರನ್ನು ಸಹ 5 ಮೆಗಾ ವಾಟ್‌ನಿಂದ 12.5 ಮೆಗಾವಾಟ್‌ಗೆ ಪರಿವರ್ತಿಸಿ ವಿದ್ಯುತ್ ಸಮಸ್ಯೆ ಪರಿಹರಿಸುವಂತೆ ಸರ್ಕಾರದ ಗಮನವನ್ನು ಸೆಳೆಯಬೇಕು ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿತ್ತು.
ಮನವಿಗೆ ಸರ್ಕಾರ ಸ್ಪಂದಿಸಿದ್ದು, ಇಲಾಖೆಯು ವೇಣೂರು ವಿದ್ಯುತ್ ವಿತರಣಾ ಕೇಂದ್ರದಲ್ಲಿ ಹಾಲಿ ಇರುವ 5 ಮೆಗಾವಾಟ್ ಪರಿವರ್ತಕವನ್ನು 12.5 ಸಾಮರ್ಥ್ಯಕ್ಕೆ ಬದಲಾವಣೆ ಮಾಡಿ ಅಳವಡಿಸಲಾಯಿತು. ಈ ಮೂಲಕ ಈ ಭಾಗದ ಬಹುಕಾಲದ ರೈತರ ಬೇಡಿಕೆ ಈಡೇರಿದಂತಾಯಿತು ಎಂದು ಸಾರ್ವಜನಿಕರು ಸರ್ಕಾರಕ್ಕೆ ಮತ್ತು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.