ಬೆಳ್ತಂಗಡಿ: ವೇಣೂರು ಸಿಎ ಬ್ಯಾಂಕ್ 2024-25ನೇ ಸಾಲಿನಲ್ಲಿ 1,86,50,423.61 ರೂ. ಲಾಭ ಗಳಿಸಿದ್ದು, ಸದಸ್ಯರಿಗೆ ಶೇ.20 ಡಿವಿಡೆಂಡ್ ನೀಡುತ್ತಿದ್ದೇವೆ. ಸಂವು ಸತತ 7ನೇ ಬಾರಿಗೆ 1 ಕೋಟಿ ರೂ.ಗೂ ಮಿಕ್ಕಿ ಲಾಭ ಗಳಿಸಿ ದಾಖಲೆ ನಿರ್ಮಿಸಿರುವುದಕ್ಕೆ ಸಂತೋಷಪಡುತ್ತೇನೆ ಎಂದು ಅಧ್ಯಕ್ಷ ಸುಂದರ ಹೆಗ್ಡೆ ಬಿ.ಇ. ಹೇಳಿದರು.
ವೇಣೂರಿನಲ್ಲಿ ಭಾನುವಾರ ಬ್ಯಾಂಕ್‌ನ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮಹಾಸಭೆಯಲ್ಲಿ ಸಹಕಾರಿ ಸಂದ ಅಭಿವೃದ್ಧಿ ದೃಷ್ಟಿಯಿಂದ ಹಲವಾರು ಅಭಿವೃದ್ಧಿ ಪರ ಚರ್ಚೆಗಳು ನಡೆಯಿತು.
ಸಂಘದ ಉಪಾಧ್ಯಕ್ಷ ರತ್ನಾಕರ ಬಿ., ಮುಖ್ಯಕಾರ್ಯನಿರ್ವಹಣಾಧಿಕಾರಿ ಜಯಂತ್ ಪೂಜಾರಿ, ನಿರ್ದೇಶಕರಾದ ರಾಮ್ ದಾಸ್ ನಾಯಕ್, ಸಂದೀಪ್ ಹೆಗ್ಡೆ, ಎಂ.ಆರ್.ಸಂತೋಷ್, ನಾಗಪ್ಪ, ಆಶಾ, ರೋಹಿಣಿ, ಕೃಷ್ಣಪ್ಪ ಮೂಲ್ಯ, ಪ್ರಶಾಂತ್, ರಾಜು ನಾಯ್ಕ, ಪ್ರವೀಣ್, ಸಿಬ್ಬಂದಿಗಳಾದ ಭರತ್ ರಾಜ್ ಕೆ., ಗೀತಾ, ದಿವ್ಯಾ ಕೆ., ರಮ್ಯಾ ಪಿ.ಜೈನ್, ಶ್ರೀನಿಧಿ ಭಟ್, ಚಂದ್ರಶೇಖರ ಪಿ., ಭಾಗ್ಯನಿಧಿ ಠೇವಣಿ ಏಜೆಂಟ್ ಅಜಿತ್ ಕುಮಾರ್ ಜೈನ್ ಮೊದಲಾದವರಿದ್ದರು.