ಜಿಲ್ಲೆ

ಬಿಎಂಟಿಸಿ ನಿರ್ದೇಶಕ ಮಂಡಳಿ ಉಪಾಧ್ಯಕ್ಷರಾಗಿ ವೆಂಕಟೇಶ್ ನೇಮಕ

ಬೆಂಗಳೂರು: ಬಿಎಂಟಿಸಿ ನಿರ್ದೇಶಕ ಮಂಡಳಿಯ ಉಪಾಧ್ಯಕ್ಷರಾಗಿ ಎಂ.ಆರ್​.ವೆಂಕಟೇಶ್​ ಅವರನ್ನು ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶಿಸಿದೆ.

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ನಿರ್ದೇಶಕ ಮಂಡಳಿಯ ಉಪಾಧ್ಯಕ್ಷರನ್ನಾಗಿ ಈ ಕೂಡಲೇ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೂ ವೆಂಕಟೇಶ್​ ಅವರನ್ನು ರಾಜ್ಯಪಾಲರ ಆದೇಶಾನುಸಾರ ನೇಮಿಸಿ ಸಾರಿಗೆ ಇಲಾಖೆ ಸರ್ಕಾರದ ಅಧಿನ ಕಾರ್ಯದರ್ಶಿ ಎಂ.ಸತ್ಯವತಿ ನ.27ರಂದು ಆದೇಶ ಹೊರಡಿಸಿದ್ದಾರೆ. ವೆಂಕಟೇಶ್​ ಅವರು ಕೋಲಾರದ ಇತ್ರಸನಹಳ್ಳಿ ಮೂಲದವರು.