ಕನಕಗಿರಿ ತಾಲೂಕಿನ ಸುಳೇಕಲ್ ಗ್ರಾಮದಲ್ಲಿ ವೀರಭದ್ರೇಶ್ವರ ಗುಗ್ಗಳ ಸೇವಾ ಕಾರ್ಯ ನಿಮಿತ್ತ ಮೆರವಣಿಗೆ ನಡೆಯಿತು. 
ಜಿಲ್ಲೆ

ವೀರಭದ್ರೇಶ್ವರ ಮೆರವಣಿಗೆ ಅದ್ದೂರಿ

Kopala - Desk - Eraveni

ಕನಕಗಿರಿ: ತಾಲೂಕಿನ ಸುಳೇಕಲ್ ಗ್ರಾಮದಲ್ಲಿ ವೀರಭದ್ರೇಶ್ವರ ಸೇವಾ ಟ್ರಸ್ಟ್ ಹಾಗೂ ಗ್ರಾಮಸ್ಥರಿಂದ ಶ್ರಾವಣ ಮಾಸದ ನಿಮಿತ್ತ ವೀರಭದ್ರೇಶ್ವರ ಗುಗ್ಗಳ ಸೇವಾ ಕಾರ್ಯ ಮಂಗಳವಾರ ಜರುಗಿತು.

ಬೆಳಗ್ಗೆ ಹಳ್ಳದಲ್ಲಿ ಗಂಗೆಸ್ಥಳ ಪೂಜೆ, ಗುಗ್ಗಳ, ಕುಂಭಾಭಿಷೇಕ, ರುದ್ರಾಭಿಷೇಕ ಜರುಗಿತು. ಹೊಸ ಗ್ರಾಪಂ ಕಚೇರಿಯಿಂದ ವೀರಭದ್ರೇಶ್ವರ ದೇವಸ್ಥಾನದವರಗೆ ಮೆರವಣಿಗೆ ಮಾಡಲಾಯಿತು. ಗಂಗೆಸ್ಥಳದ ಗುಗ್ಗಳದಲ್ಲಿ ಕನಕಗಿರಿ, ಗಂಗಾವತಿ, ಚನ್ನಳ್ಳಿ, ಹರಿಹರ, ಕಲಬುರ್ಗಿ ಸೇರಿ ಗ್ರಾಮದ ನೂರಾರು ಭಕ್ತರು ಭಾಗವಹಿಸಿದ್ದರು.

ಗ್ರಾಪಂ ಸದಸ್ಯ ಮಹಾಂತೇಶ ದಾಸನಾಳ, ಪ್ರಮುಖರಾದ ಬಸವರಾಜ ಬೂಸಾರಿ, ಶೇಖರಪ್ಪ ಭಾವಿಕಟ್ಟಿ, ಮಹಾಂತೇಶ ಬಾವಿಕಟ್ಟಿ, ಜಗದೀಶ ಅಂಗಡಿ, ಶರಣಪ್ಪ ಅಂಗಡಿ, ವಿರುಪಣ್ಣ ಮಾಲಿ, ಮಲ್ಲಿಕಾರ್ಜುನ ರೊಟ್ಟಿ, ಪ್ರಕಾಶ ಅಕ್ಕಿ, ಡಾ.ಶಿವಾನಂದ, ಮಲ್ಲಿಕಾರ್ಜುನ ಪವಾಡಶೆಟ್ಟಿ, ಪಂಪನಗೌಡ ಪೊ.ಪಾ., ರೇವಣ ಸಿದ್ದಯ್ಯ ಸಂಡೂರು, ವೀರೇಶ ಅಂಗಡಿ ಇತರರಿದ್ದರು.