ಜಿಲ್ಲೆ

ವಿವಿಧ ಕಾಮಗಾರಿಗಳ ಶಾಸಕ ಗುರ್ಮೆ ಗುದ್ದಲಿ ಪೂಜೆ

ಇಂದಿರಾ ಎನ್ ಕೆ

ಪಡುಬಿದ್ರಿ: ಕಾಪು ವಿಧಾನಸಭಾ ಕ್ಷೇತ್ರದ ಎಲ್ಲೂರು ಗ್ರಾಪಂ ವ್ಯಾಪ್ತಿಯಲ್ಲಿ ಶಾಸಕರ ಶಿಫಾರಸ್ಸಿನ ಮೇರೆಗೆ ಮಂಜೂರಾಗಿರುವ 1.15 ಕೋಟಿ ರೂ. ಅನುದಾನದಲ್ಲಿ ಕೈಗೊಂಡ ವಿವಿಧ ಕಾಮಗಾರಿಗಳ ಗುದ್ದಲಿಪೂಜೆ ಹಾಗೂ ಪೂರ್ಣಗೊಂಡ ಕಾಮಗಾರಿಗಳ ಉದ್ಘಾಟನೆಯನ್ನು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಬುಧವಾರ ನೆರವೇರಿಸಿದರು.

ಅದಮಾರು ಬಳಿ 60 ಲಕ್ಷ ರೂ ವೆಚ್ಚದ ಮಲ್ಟಿ ಪರ್ಪಸ್ ಸೆಂಟರ್ ನಿರ್ಮಾಣ, ಮಡಿವಾಳ ತೋಟ ಹರೀಶ್ ಶೆಟ್ಟಿ ಮನೆ ಬಳಿ 10 ಲಕ್ಷ ರೂ. ವೆಚ್ಚದ ರಸ್ತೆ, 10 ಲಕ್ಷ ವೆಚ್ಚದ ಮಾಣಿಯೂರು- ಕೋಡ್ದಬ್ಬು ದೈವಸ್ಥಾನ ರಸ್ತೆ, 10 ಲಕ್ಷ ರೂ. ವೆಚ್ಚದ ಎಲ್ಲೂರು ಗುತ್ತು ರಸ್ತೆ ಅಭಿವೃದ್ಧಿ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಲಾಯಿತು. ಉಳ್ಳೂರು ವಿಮಲಾ ಪೂಜಾರ್ತಿ ಮನೆ ಬಳಿ ರಸ್ತೆ, ಮಾಣಿಯೂರು ಮಠ ರಸ್ತೆ, ಕುಂಜೂರು ಶಾಂಭವಿ ಶೆಟ್ಟಿ ಮನೆ ಬಳಿ ರಸ್ತೆ, ಪಾಂಡುರಂಗ ಭಜನಾ ಮಂದಿರದ ಶೌಚಗೃಹ ಮತ್ತು ಸ್ನಾನದ ಕೋಣೆ ನಿರ್ಮಾಣ ಕಾಮಗಾರಿಗಳನ್ನು ಶಾಸಕರು ಉದ್ಘಾಟಿಸಿದರು.

ಎಲ್ಲೂರು ಗ್ರಾಪಂ ಅಧ್ಯಕ್ಷ ರವಿರಾಜ್ ರಾವ್, ಉಪಾಧ್ಯಕ್ಷೆ ಉಷಾ, ಸದಸ್ಯರಾದ ಜಯರಾಮ ದೇವಾಡಿಗ, ಶಾಂತಿ ಆಚಾರ್ಯ, ವಸಂತಿ ಮಧ್ವರಾಜ್, ಹರೀಶ್, ದಯಾನಂದ ಶೆಟ್ಟಿಗಾರ್, ಸಂತೋಷ್ ಶೆಟ್ಟಿ, ಪಿಡಿಒ ಪ್ರದೀಪ್, ಎಲ್ಲೂರು ಬಿಜೆಪಿ ಶಕ್ತಿ ಕೇಂದ್ರದ ಸಂಚಾಲಕ ಸತೀಶ್ ಶೆಟ್ಟಿ, ಪ್ರಮುಖರಾದ ಹರೀಶ್ ಶೆಟ್ಟಿ, ಗಣೇಶ್ ಕುಲಾಲ್, ಉದಯ ಅದಮಾರು, ಸದಾನಂದ ಪೂಜಾರಿ, ಸುಕೇಶ್ ಶೆಟ್ಟಿ, ರಾಜೇಂದ್ರ ಸಾಲ್ಯಾನ್, ರಾಘವೇಂದ್ರ ರಾವ್ ಉಪಸ್ಥಿತರಿದ್ದರು.