ಯಲಬುರ್ಗಾ ತಾಲೂಕಿನ ವಣಗೇರಿ ಗ್ರಾಪಂಗೆ ಎರಡನೇ ಅವಧಿಗೆ ಅವಿರೋಧ ಆಯ್ಕೆಯಾದ ಅಧ್ಯಕ್ಷೆ ಸುನಂದಾ ಭಜಂತ್ರಿ, ಉಪಾಧ್ಯಕ್ಷ ಬಸವರಾಜ ರ‌್ಯಾವಣಕಿ ಅವರನ್ನು ಸದಸ್ಯರು, ಬೆಂಬಲಿಗರು ಸನ್ಮಾನಿಸಿದರು.  
ಜಿಲ್ಲೆ

ವಣಗೇರಿ ಗ್ರಾಪಂಗೆ ಸುನಂದಾ ಬಸಪ್ಪ ಭಜಂತ್ರಿ ಅಧ್ಯಕ್ಷೆ

ಯಲಬುರ್ಗಾ: ತಾಲೂಕಿನ ವಣಗೇರಿ ಗ್ರಾಪಂಗೆ ಎರಡನೇ ಅವಧಿಗೆ ಸುನಂದಾ ಬಸಪ್ಪ ಭಜಂತ್ರಿ (ಅಧ್ಯಕ್ಷೆ), ಬಸವರಾಜ ನಿಂಗಪ್ಪ ರ‌್ಯಾವಣಕಿ (ಉಪಾಧ್ಯಕ್ಷ)ರಾಗಿ ಶುಕ್ರವಾರ ಅವಿರೋಧ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ವಿ.ಕೆ.ಬಡಿಗೇರ್ ಘೋಷಿಸಿದರು.

ಬಳಿಕ ಬೆಂಬಲಿಗರು ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿದರು. ಜು.18ರಂದು ನಡೆಯಬೇಕಿದ್ದ ಚುನಾವಣೆಯನ್ನು ಕೋರಂ ಕೊರತೆ ಕಾರಣ ಜು.21ಕ್ಕೆ ಮುಂದೂಡಿಕೆಯಾಗಿತ್ತು. ಆಯ್ಕೆ ಸಂದರ್ಭದಲ್ಲಿ ಪಿಡಿಒ ಬಸವರಾಜಸ್ವಾಮಿ ಮಳಿಮಠ, ಪ್ರಮುಖರಾದ ಶರಣಪ್ಪ ದಿವಾಣದಾರ, ಶಿವಮೂರ್ತೆಯ್ಯ ಸಸಿಮಠ, ಶಂಕ್ರಪ್ಪ ಕೋತಿ, ಗುರುಸಿದ್ದಯ್ಯ ಹಿರೇಮಠ, ಫಕೀರಗೌಡ ಮಾಲಿಪಾಟೀಲ್, ರಾಮಣ್ಣ ಕರಿಗಾರ, ಅಮಾತೆಪ್ಪ ಹಡಪದ, ಇಂದ್ರಪ್ಪ ಭಜಂತ್ರಿ, ಮುತ್ತಣ್ಣ ಶಿವಪೂಜಿ, ಹಳ್ಳಪ್ಪ ಗಟ್ಟೆಪ್ಪನವರ್ ಇತರರಿದ್ದರು.