ಕಾಪು ತಹಸೀಲ್ದಾರ್ ಕಚೇರಿ ಸಭಾಂಗಣದಲ್ಲಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಪ್ರತಿಭಾ ಆರ್., ಬಸವರಾಜು, ರವಿಕಿರಣ್, ದೇವಕಿ, ಅಶೋಕ್ ಕೋಟೆಕಾರ್ ಇದ್ದರು.  
ಜಿಲ್ಲೆ

ವಾಲ್ಮೀಕಿಯ ಹಿರಿಮೆ ಪ್ರಾತಃಸ್ಮರಣೀಯ

ಇಂದಿರಾ ಎನ್ ಕೆ

ಪಡುಬಿದ್ರಿ: ವಾಲ್ಮೀಕಿಯವರಂತೆ ಮನಃಪರಿವರ್ತನೆ ಮಾಡಿಕೊಂಡು ಸದ್ಗುಣರಾಗಲು ಎಲ್ಲರಿಗೂ ಸಾಧ್ಯವಿದೆ. ಜಗತ್ತಿನ ಪ್ರಥಮ ಕಾವ್ಯ ರಚನೆಕಾರರಾದ ವಾಲ್ಮೀಕಿ ಅವರ ಹಿರಿಮೆ ಎಂದೆಂದಿಗೂ ಪ್ರಾತಃಸ್ಮರಣೀಯ ಎಂದು ತಹಸೀಲ್ದಾರ್ ಪ್ರತಿಭಾ ಆರ್. ಹೇಳಿದರು.
ಕಾಪು ತಹಸೀಲ್ದಾರ್ ಕಚೇರಿ ಸಭಾಂಗಣದಲ್ಲಿ ಗುರುವಾರ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಜಗತ್ತಿನ ಮಹಾಕಾವ್ಯ ರಾಮಾಯಣದ ಮೂಲ ಕರ್ತೃ ವಾಲ್ಮೀಕಿ ಅವರ ನಂತರ ಅದೆಷ್ಟೋ ಜನ ರಾಮಾಯಣ ಬರೆದರೂ ಎಲ್ಲಕ್ಕೂ ಮೂಲ ಆಧಾರ ವಾಲ್ಮೀಕಿ ರಾಮಾಯಣವೇ ಆಗಿದೆ. ಇಂದಿನ ಯುವಜನತೆಗೆ ಒಳ್ಳೆಯ ಹಾದಿಯಲ್ಲಿ ನಡೆಯಲು ಅದ್ಭುತ ಸಂದೇಶವನ್ನು ಮಹರ್ಷಿ ನೀಡಿದ್ದಾರೆ. ಅವರು ರಾಮಾಯಣದ ಮೂಲಕ ನೀಡಿರುವ ಪಿತೃ ವಾಕ್ಯ ಪರಿಪಾಲನೆ, ಪಿತೃದೇವೋಭವ, ಮಮತೆ, ಸಮತೆ, ತ್ಯಾಗ, ದೇಶಪ್ರೇಮ, ಅಳಿಲುಸೇವೆ ಮುಂತಾದ ಮಾನವೀಯ ಮತ್ತು ಸಾಮಾಜಿಕ ಮೌಲ್ಯಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು. ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಬಸವರಾಜು, ಉಪ ತಹಸೀಲ್ದಾರ್‌ಗಳಾದ ರವಿಕಿರಣ್, ದೇವಕಿ, ಅಶೋಕ್ ಕೋಟೆಕಾರ್, ಇತರ ಸಿಬ್ಬಂದಿ ಭಾಗವಹಿಸಿದ್ದರು.