ಹೇಮನಾಥ್ ಪಡುಬಿದ್ರಿ ಇತ್ತ ಮಲತ್ಯಾಜ್ಯ ಸಂಸ್ಕರಣೆ, ವಿಲೇವಾರಿ ಘಟಕವೂ ಇಲ್ಲವಾಗಿದ್ದು, ಅತ್ತ ಸೂಕ್ತ ನಿರ್ವಹಣೆಯಿಲ್ಲದೇ ಕಾಪು ಪುರಸಭೆಗೆ ಸೇರಿದ ಸಕ್ಕಿಂಗ್ ಯಂತ್ರ ತುಕ್ಕು ಹಿಡಿಯಲಾರಂಭಿಸಿದೆ. ಒಣ ಶೌಚಾಲಯ, ತೆರೆದ ಚರಂಡಿ ಮತ್ತು ಒಳಚರಂಡಿ ಸ್ವಚ್ಛಗೊಳಿಸಲು ಮಾನವ ಸಂಪನ್ಮೂಲದ ಬದಲಾಗಿ ಸಕ್ಕಿಂಗ್ ಯಂತ್ರ ಬಳಸುವಂತೆ ರಾಜ್ಯ ಸರ್ಕಾರ 2017ರಲ್ಲೇ ಆದೇಶ ಹೊರಡಿಸಿತ್ತು. ರಾಜ್ಯದ ಎಲ್ಲ ನಗರಸಭೆ, ಪಟ್ಟಣ ಪಂಚಾಯಿತಿ ಹಾಗೂ ಪುರಸಭೆಗಳು ಸಕ್ಕಿಂಗ್ ಯಂತ್ರ ಖರೀದಿಸಿದ್ದವು. ಕಾಪು ಪುರಸಭೆ ಕೂಡ 14ನೇ ಹಣಕಾಸು ನಿಧಿಯಿಂದ 21 ಲಕ್ಷ ರೂ. ವ್ಯಯಿಸಿ 2018ರಲ್ಲಿ ಸಕ್ಕಿಂಗ್ ಯಂತ್ರ ಖರೀದಿಸಿತ್ತು. ಈಗ ಬಳಕೆಯಾಗದೆ ಮೂಲೆಸೇರಿದೆ. * ಎಫ್‌ಎಸ್‌ಟಿಪಿಗೆ ಜಮೀನು ಕೊರತೆ: ಸರ್ಕಾರಿ ಜಮೀನಿನ ಕೊರತೆಯಿಂದ ಸರ್ಕಾರದ ಯೋಜನೆಗಳನ್ನು ಜಾರಿಗೊಳಿಸಲು ಕಾಪು ಪುರಸಭೆಗೆ ಸಾಧ್ಯವಾಗುತ್ತಿಲ್ಲ. ಆರಂಭದಲ್ಲಿ ಎಲ್ಲೂರಿನ ಸರ್ಕಾರಿ ಜಮೀನಿನಲ್ಲಿ ಘನತ್ಯಾಜ್ಯ ವಿಲೇವಾರಿ ಘಟಕ ನಿರ್ಮಿಸಲಾಗಿತ್ತು. ಇತ್ತ ಕೊಳಚೆ ನೀರು ಶುದ್ಧೀಕರಣ ಟಕ ನಿರ್ವಾಣಕ್ಕೂ ಸೂಕ್ತ ಜಮೀನು ಲಭ್ಯವಾಗದಿರುವುದರಿಂದ ಎಫ್‌ಎಸ್‌ಟಿಪಿ ನಿರ್ವಾಣ ವಿಳಂಬವಾಗುತ್ತಿದೆ. ಇದರಿಂದ ಸಕ್ಕಿಂಗ್ ಯಂತ್ರ ಬಳಕೆಯಾಗದೆ ಪುರಸಭೆ ಶೆಡ್‌ನಲ್ಲೇ ಉಳಿದಿದೆ. ಕಾಪು ಪುರಸಭೆ ವ್ಯಾಪ್ತಿಯ ಜನರು ದುಬಾರಿ ಹಣ ತೆತ್ತು ದೂರದ ಉಡುಪಿ ಅಥವಾ ಮಂಗಳೂರು ಭಾಗದ ಸಕ್ಕಿಂಗ್ ಯಂತ್ರ ತರಬೇಕಾದ ಅನಿವಾರ್ಯತೆ ಎದುರಾಗಿದೆ.
ಪ್ರತಿಯೊಂದು ಯಂತ್ರಗಳನ್ನೂ ಸೂಕ್ತ ನಿರ್ವಹಣೆ ಮಾಡಿದರೆ ಮಾತ್ರವೇ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿದ್ದು, ಆದರೆ ಕಾಪು ಪುರಸಭೆಯ ಸಕ್ಕಿಂಗ್ ಯಂತ್ರ ಮಾತ್ರ ಏಳು ವರ್ಷದಿಂದ ಮೂಲೆಯಲ್ಲಿದ್ದರೂ ನಿರ್ವಹಣೆ ಮಾಡಬೇಕಾದ ಅನಿವಾರ್ಯತೆ ಇದೆ. ಪ್ರತಿ ವರ್ಷವೂ ವಿಮೆ ಪಾವತಿ, ದುರಸ್ತಿ ಸಹಿತ ನಿರ್ವಹಣೆಗೆ ಭಾರಿ ಮೊತ್ತವನ್ನೂ ವ್ಯಯಿಸಲಾಗುತ್ತಿದ್ದು, ಕಾಪು ಪುರಸಭೆಗೆ ಇದುವೇ ದೊಡ್ಡ ಹೊರೆಯಾಗಿದೆ.
ಸಕ್ಕಿಂಗ್ ಯಂತ್ರವಿದ್ದರೂ ಸಂಗ್ರಹಿಸಿದ ನೀರನ್ನು ವಿಲೇವಾರಿ ವಾಡಲು ಸೂಕ್ತ ಸ್ಥಳಾವಕಾಶವಿಲ್ಲದೆ ತೊಂದರೆಯಾಗಿದೆ. ಅಭಿವೃದ್ಧಿ ಹೊಂದುತ್ತಿರುವ ಕಾಪುವಿನಲ್ಲಿ ಕೊಳಚೆ ನೀರು ಶುದ್ಧೀಕರಣ ಟಕ ನಿರ್ವಾಣ ಸಹಿತ ಅಗತ್ಯ ಮೂಲಸೌಕರ್ಯ ಕಲ್ಪಿಸಲು ಪುರಸಭೆ ಜತೆ ಖಾಸಗಿ ಸಹಕಾರವೂ ಅಗತ್ಯ. -ಅರುಣ್ ಶೆಟ್ಟಿ ಪಾದೂರು, ಕಾಪು ಪುರಸಭೆ ಸದಸ್ಯ ಎಲ್ಲೂರಿನ ನತ್ಯಾಜ್ಯ ವಿಲೇವಾರಿ ಟಕದ ಆವರಣದಲ್ಲಿಯೇ ಇದೀಗ ಎಫ್‌ಎಸ್‌ಟಿಪಿ ನಿರ್ವಾಣಕ್ಕೆ ಪುರಸಭೆ ಮುಂದಾಗಿದೆ. ಅದಕ್ಕಾಗಿ ಯೋಜನೆ ರೂಪಿಸಿದ್ದು, ಸಂಬಂಧಿಸಿದ ಕಂಪನಿಗೆ ಅದನ್ನು ವಹಿಸಿಕೊಡಲಾಗುತ್ತಿದೆ. ವರ್ಷದೊಳಗೆ ಪೂರ್ಣಗೊಳ್ಳುವ ವಿಶ್ವಾಸ ಇದ್ದು, ಸಕ್ಕಿಂಗ್ ಯಂತ್ರ ಬಳಕೆಗೆ ದರ ನಿಗದಿಗೆ ನಿರ್ಣಯಿಸಲಾಗುವುದು. -ನಾಗರಾಜ್ ಸಿ., ಕಾಪು ಪುರಸಭೆ ಮುಖ್ಯಾಧಿಕಾರಿ