sujAta 
ಜಿಲ್ಲೆ

ಉಪ ಪ್ರಾಚಾರ್ಯೆಯಾಗಿ ಸುಜಾತ ಅಧಿಕಾರ ಸ್ವೀಕರ

Kopala - Desk - Eraveni

ಕಂಪ್ಲಿ: ಇಲ್ಲಿನ ಷಾ.ಮಿಯಾಚಂದ್ ಸರ್ಕಾರಿ ಪ್ರೌಢಶಾಲೆಗೆ ಉಪ ಪ್ರಾಚಾರ್ಯೆಯಾಗಿ ಸುಜಾತ ಶುಕ್ರವಾರ ಪ್ರಭಾರ ಉಪ ಪ್ರಾಚಾರ್ಯ ಟಿ.ಎಂ.ಬಸವರಾಜ ಅವರಿಂದ ಅಧಿಕಾರ ಸ್ವೀಕರಿಸಿದರು.

ಸುಜಾತ ಕೊಪ್ಪಳದ ಡಿಡಿಪಿಐ ಕಚೇರಿಯಲ್ಲಿ ವಿಜ್ಞಾನ ವಿಷಯ ಪರಿವೀಕ್ಷಕಿಯಾಗಿ ಕರ್ತವ್ಯ ನಿರ್ವಹಿಸಿದ್ದು ಅಲ್ಲಿಂದ ಇಲ್ಲಿಗೆ ವರ್ಗಗೊಂಡಿದ್ದಾರೆ. ಇದಕ್ಕೂ ಮುನ್ನಾ 2006 ರಿಂದ 2012ರವರೆಗೆ ಇದೇ ಶಾಲೆಯಲ್ಲಿ ವಿಜ್ಞಾನ ಶಿಕ್ಷಕಿಯಾಗಿ ಕರ್ತವ್ಯನಿರ್ವಹಿಸಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.