ಜಿಲ್ಲೆ

ದುರಸ್ತಿ ಕಾಣದ ತೆರೆದ ಚರಂಡಿ

Manikya M

ವಿಜಯವಾಣಿ ಸುದ್ದಿಜಾಲ ಗುರುಪುರ

ಮೂಡುಶೆಡ್ಡೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎದುರುಪದವಿನ ಶ್ರೀ ದುರ್ಗಾಚಾಮುಂಡೇಶ್ವರೀ ದೇವಸ್ಥಾನ ಹಾಗೂ ಶ್ರೀ ಕೋರ‌್ದಬ್ಬು ದೈವಸ್ಥಾನದ ಮಧ್ಯೆ ಹಾದು ಹೋಗಿರುವ ರಸ್ತೆ ಪಕ್ಕದ ತೆರೆದ ಚರಂಡಿ ದುರ್ವಾಸನೆ ಬೀರುತ್ತಿದೆ. ದೇವಸ್ಥಾನ ಸಮೀಪದ ಮನೆಯೊಂದರ ಬಳಿ ತೆರೆದ ಚರಂಡಿಯಲ್ಲಿರುವ ಸುವಾರು 30-40 ವರ್ಷ ಹಳೆಯದಾದ ನಿರುಪಯುಕ್ತ ಕೊಳವೆ ಬಾವಿಯು ಸ್ಥಳೀಯರ ಸ್ವಾಸ್ಥ್ಯ ಕೆಡಿಸಿದ್ದು, ದುರಸ್ತಿಗಾಗಿ ಪರಿಸರವಾಸಿಗಳು ಆಗ್ರಹಿಸಿದ್ದಾರೆ.

ಸುತ್ತಲಿನ ವಸತಿ ಬಡಾವಣೆಯ ಕೊಳಚೆ ನೀರು ಈ ಚರಂಡಿಯಲ್ಲಿ ಹರಿದು ಬಂದು ದೇವಸ್ಥಾನದ ಬಳಿ ನಿಲ್ಲುತ್ತಿದ್ದು, ಪರಿಸರ ಗಬ್ಬುವಾಸನೆ ಬೀರುತ್ತಿದ್ದು, ಸಾಂಕ್ರಾಮಿಕ ರೋಗ ಭೀತಿ ಉಂಟಾಗಿದೆ. ಸಂಜೆಯಾಗುತ್ತಲೇ ಸೊಳ್ಳೆ ಕಾಟ ಹೆಚ್ಚಿದೆ.

ಕಲ್ಲು ಚಪ್ಪಡಿ ಹಾಸಿ ಚರಂಡಿ ಮುಚ್ಚುವಂತೆ ಮೂಡುಶೆಡ್ಡೆ ಪಂಚಾಯಿತಿ ಆಡಳಿತಕ್ಕೆ ಸ್ಥಳೀಯರು ಮನವಿ ನೀಡಿದ್ದರೂ ಪ್ರಯೋಜನವಾಗಿಲ್ಲ. ಕ್ಷೇತ್ರದ ಶಾಸಕ ಉಮಾನಾಥ ಕೋಟ್ಯಾನ್ ಅವರಿಗೂ ಮನವಿ ವಾಡಿಕೊಳ್ಳಲಾಗಿದೆ. ಸದ್ಯ ದೇವಸ್ಥಾನದಲ್ಲಿ ಜೀರ್ಣೋದ್ಧಾರ ಕೆಲಸಗಳು ನಡೆಯುತ್ತಿದ್ದು, ಈಗಲಾದರೂ ಕಾಯಕಲ್ಪಕ್ಕೆ ಮನಸ್ಸು ವಾಡಬಹುದು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ಅಪಾಯಕಾರಿ ಕೊಳವೆ ಬಾವಿ

ದೇವಸ್ಥಾನಕ್ಕಿಂತ ಮುಂದಕ್ಕೆ ಮನೆಯೊಂದರ ಬಳಿ ಇದೇ ಚರಂಡಿಯಲ್ಲಿ ಇರುವ ಅತಿ ಹಳೆಯದಾದ ನಿರುಪಯುಕ್ತ ತೆರೆದ ಕೊಳವೆ ಬಾವಿಯು ಅಪಾಯ ಆಹ್ವಾನಿಸುವಂತಿದೆ. ನಿರುಪಯುಕ್ತ ಕೊಳವೆ ಬಾವಿಗಳಿಂದ ಮಕ್ಕಳ ಜೀವಕ್ಕೆ ಅಪಾಯವಿದೆ ಎಂದು ಜಿಲ್ಲಾಡಳಿತ ಮತ್ತು ಪಂಚಾಯಿತಿಗೆ ಸ್ಥಳೀಯರು ಮನವಿ ವಾಡಿದ್ದರೂ, ಈವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸ್ಥಳೀಯರು ದೂರಿದ್ದಾರೆ. ತೆರೆದ ಚರಂಡಿಗೆ ಚಪ್ಪಡಿ ಕಲ್ಲು ಹಾಸಿ ದುರಸ್ತಿ ವಾಡಬೇಕು. ಮಕ್ಕಳಿಗೆ ಅಪಾಯಕಾರಿಯಾಗಿರುವ ನಿರುಪಯುಕ್ತ ತೆರೆದ ಕೊಳವೆ ಬಾವಿ ಮುಚ್ಚಬೇಕು. ಪಂಚಾಯಿತಿ ಮತ್ತು ಜಿಲ್ಲಾಡಳಿತ ತಕ್ಷಣ ಕ್ರಮ ಜರುಗಿಸದಿದ್ದರೆ ಪ್ರತಿಭಟನೆ ಹಾದಿ ಹಿಡಿಯಬೇಕಾಗುತ್ತದೆ ಎಂದು ಸಾರ್ವಜನಿಕರು ಎಚ್ಚರಿಸಿದ್ದಾರೆ. ಎದುರುಪದವು ರಸ್ತೆಯ ಬಹುತೇಕ ಭಾಗದಲ್ಲಿ ತೆರೆದ ಚರಂಡಿ ಇದೆ. ಉದ್ಯಮ ಮತ್ತು ಮನೆಗಳ ಕೊಳಚೆ ನೀರು ಚರಂಡಿಗಳಲ್ಲಿ ತುಂಬಿ ಹರಿಯುತ್ತದೆ. ಇಲ್ಲಿನ ದೇವಸ್ಥಾನ, ದೈವಸ್ಥಾನಗಳಿಗೆ ಬರುವ ಭಕ್ತರಿಗೆ ನಿತ್ಯವೂ ಗುಬ್ಬುವಾಸನೆ ತಪ್ಪಿದ್ದಲ್ಲ. ಪಂಚಾಯಿತಿಗೆ ಮನವಿ ನೀಡಲಾಗಿದೆ. ಚರಂಡಿ ದುರಸ್ತಿಗೆ ಹಣವಿಲ್ಲ ಎಂಬ ಉತ್ತರ ಸಿಕ್ಕಿದೆ. ಉಳಿದೆಡೆ ದುರಸ್ತಿ ಕಾರ್ಯ ನಡೆಸುತ್ತಿದ್ದರೂ ಈ ಭಾಗಕ್ಕೆ ವಾತ್ರ ಅನುದಾನ ಕೊರತೆಯೇ? ಭಾಸ್ಕರ್ ಸುವರ್ಣ ಎದುರಪದವು, ಸ್ಥಳೀಯ ನಿವಾಸಿ. ತೆರೆದ ಚರಂಡಿ ಮತ್ತು ತೆರೆದ ನಿರುಪಯುಕ್ತ ಕೊಳವೆ ಬಾವಿಯಿಂದ ಅಪಾಯ ಕಾದಿದೆ. ಚರಂಡಿಗೆ ಚಪ್ಪಡಿ ಕಲ್ಲು ಹಾಸಬೇಕು. ಸೊಳ್ಳೆ ಕಾಟದಿಂದ ಪರಿಸರವಾಸಿಗಳಿಗೆ ಮುಕ್ತಿ ಮುಕ್ತಿ ನೀಡಬೇಕು. ಈ ಎಲ್ಲ ಕೆಲಸ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಮುಂಚಿತವಾಗಿ ನಡೆಸಬೇಕಿದೆ. ಪದ್ಮನಾಭ ಕುಂದರ್, ಶ್ರೀ ದುರ್ಗಾಚಾಮುಂಡೇಶ್ವರಿ ದೇವಸ್ಥಾನದ ಅರ್ಚಕ.