ವೀಶ್ವೇಶ್ವರಯ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಅಸಂಘಟಿತ ಕಾರ್ಮಿಕರ ಸಂಘ ತುರ್ವಿಹಾಳ ಘಟಕದಿಂದ ಪಪಂ ಆರೋಗ್ಯ ನಿರೀಕ್ಷಕ ಅಮರೇಶಪ್ಪಗೆ ಮನವಿ ಸಲ್ಲಿಸಲಾಯಿತು. ಪಪಂ ಜೆಇ ಪ್ರಿಯಾಂಕಾ, ಸಂಘಟನೆ ಪ್ರಮುಖರಾದ ಹೊನ್ನೂರಪ್ಪ ಕುಂಬಾರ, ಮುನಿಸ್ವಾಮಿ ಕಟ್ಟಿಮನಿ, ಚಂದ್ರಶೇಖರ ಕುಂಬಾರ ಇದ್ದರು. 
ಜಿಲ್ಲೆ

ಶುದ್ಧೀಕರಿಸದ ನೀರು ಪೂರೈಕೆ ಸರಿಯಲ್ಲ

ಸಿಂಧನೂರು: ತಾಲೂಕಿನ ತುರ್ವಿಹಾಳ ಪಟ್ಟಣಕ್ಕೆ ಕುಡಿವ ನೀರಿನ ಸೌಲಭ್ಯ ಕಲ್ಪಿಸುವಂತೆ ಒತ್ತಾಯಿಸಿ ಮಂಗಳವಾರ ಶ್ರೀವೀಶ್ವೇಶ್ವರಯ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಅಸಂಘಟಿತ ಕಾರ್ಮಿಕರ ಸಂಘದ ಪದಾಧಿಕಾರಿಗಳು ಪಪಂ ಆರೋಗ್ಯ ನಿರೀಕ್ಷಕ ಅಮರೇಶಪ್ಪರಿಗೆ ಮನವಿ ಸಲ್ಲಿಸಿದರು.

ಪಪಂ ಚುನಾವಣೆ ಮುಗಿದು ಎರಡುವರೆ ವರ್ಷ ಕಳೆದಿದ್ದು, ಇದುವರೆಗೆ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆ ನಡೆದಿಲ್ಲ. ಅಧಿಕಾರಿಗಳೇ ಅಡಳಿತ ನಡೆಸುತ್ತಿರುವುದರಿಂದ ಅಭಿವೃದ್ಧಿ ಕುಂಠಿತಗೊಂಡಿದೆ. ತಾಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಣೆ ಮಾಡಲಾಗಿದೆ.

ತಾಲೂಕಿನ ಹಲವು ಕಡೆ ನೀರಿಗೂ ಬರಗಾಲ ಬಂದಿದೆ. ಕೆರೆಗಳನ್ನು ಅರ್ಧಮರ್ಧ ತುಂಬಿಸಿರುವುದು ಸರಿಯಲ್ಲ. ಬಹುಗ್ರಾಮಗಳ ಕೆರೆಯಿಂದ ನೀರನ್ನು ಶುದ್ಧೀಕರಿಸದೆ ನೇರವಾಗಿ ಪೂರೈಕೆ ಮಾಡಲಾಗುತ್ತಿದೆ.

ಕಲುಷಿತವೆಂದು ತಿಳಿದರು. ಬಳಸಬೇಕಾಗಿದೆ. ತುರ್ವಿಹಾಳ ಪಟ್ಟಣಕ್ಕೆ ಕುಡಿವ ನೀರಿನ ಸೌಕರ್ಯ, ವಿವಿಧ ವಾರ್ಡ್‌ಗಳಲ್ಲಿ ನಿರ್ಮಿಸಿರುವ ನೀರಿನ ತೊಟ್ಟಿಗಳನ್ನು ಸರಿಯಾಗಿ ನಿರ್ವಹಿಸಬೇಕು. ಸಾರ್ವಜನಿಕ ರಸ್ತೆಗಳನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು ಎಂದು ಒತ್ತಾಯಿಸಿದರು.

ಸಂಘಟನೆ ಪ್ರಮುಖರಾದ ಹೊನ್ನೂರಪ್ಪ ಕುಂಬಾರ, ಮುನಿಸ್ವಾಮಿ ಕಟ್ಟಿಮನಿ, ಚಂದ್ರಶೇಖರ ಕುಂಬಾರ, ವೀರೇಶ, ಸೋಮನಾಥ ಮಾಟೂರು, ಮಲ್ಲಿಕಾರ್ಜುನ ಭಂಗಿ ಇತರರಿದ್ದರು.