ಜಿಲ್ಲೆ

ಗೂಗಲ್ ಪೇ ಗ್ರಾಹಕರೇ ಹುಷಾರ್: ಸಮಸ್ಯೆ ಎಂದು ಕಸ್ಟಮರ್ ಕೇರ್ ಮೊರೆ ಹೋದವನಿಗೆ ಕಾದಿತ್ತು ಶಾಕ್!

ಬೆಂಗಳೂರು: ಗೂಗಲ್​ ಪೇ ಆ್ಯಪ್​ ಸಮಸ್ಯೆಯನ್ನು ಬಗೆಹರಿಸಿಕೊಳ್ಳಲು ಯತ್ನಿಸಿದ ಯುವಕನೊಬ್ಬ ತನ್ನ ಖಾತೆಯಿಂದ ಹಣ ಕಳೆದುಕೊಂಡು ಮೋಸ ಹೋಗಿರುವ ಘಟನೆ ನಡೆದಿದೆ.

ಬೆಂಗಳೂರಿನ ಗವಿಪುರಂ ನಿವಾಸಿ ಹರೀಶ್ ಮೋಸ ಹೋದ ಯುವಕ. ಗೂಗಲ್ ಪೇ ಓಪನ್ ಆಗದ ಹಿನ್ನೆಲೆಯಲ್ಲಿ ಗೂಗಲ್​ನಲ್ಲಿ ಕಸ್ಟಮರ್ ಕೇರ್ ನಂಬರ್ ಹುಡುಕಾಡಿದ್ದ. ಈ ವೇಳೆ ಸಿಕ್ಕ 9901771222 ನಂಬರ್​ಗೆ ಕರೆ ಮಾಡಿದ್ದ. ಆದರೆ ಆರಂಭದಲ್ಲಿ ಯಾವುದೇ ಪ್ರತಿಕ್ರಿಯೆ ಬರಲಿಲ್ಲ.

ಇದಾದ ಕೆಲವೇ ಕ್ಷಣಗಳಲ್ಲಿ 06291766339 ನಂಬರ್​ನಿಂದ ಹರೀಶ್​ಗೆ ಕರೆ ಬಂದಿದೆ. ಅಪರಿಚಿತನೊಬ್ಬ ಮಾತನಾಡಿ ನಿಮ್ಮ ಗೂಗಲ್ ಪೇ ಸಮಸ್ಯೆ ಆಗಿದೆ. ನಾವು ಕೇಳುವ ಮಾಹಿತಿ ನೀಡಿದರೆ ಬಗೆಹರಿಯುತ್ತೆ ಎಂದಿದ್ದಾರೆ.

ಅದನ್ನು ನಂಬಿದ ಹರೀಶ್​, ಡೆಬಿಟ್ ಕಾರ್ಡ್ ನಂಬರ್, ಪಿನ್​ಕೋಡ್ ಹಾಗೂ ಓಟಿಪಿಯನ್ನೂ ನೀಡಿದ್ದಾನೆ. ಬಳಿಕ ಅಪರಿಚಿತ ವ್ಯಕ್ತಿ ನಿಮ್ಮ ಗೂಗಲ್ ಪೇ ಸರಿ ಆಗಿದೆ. ಈಗ ಓಪನ್ ಮಾಡಿ ಎಂದು ಫೋನ್​ ಸಂಪರ್ಕ ಕಡಿದುಕೊಂಡಿದ್ದಾನೆ.

ಇತ್ತ ಕಾಲ್ ಕಟ್ ಮಾಡಿ ನೋಡ್ತಿದ್ದಂತೆ ಅಕೌಂಟ್​ನಲ್ಲಿದ್ದ 24,500 ರೂಪಾಯಿ ಮಂಗಮಾಯವಾಗಿದೆ. ಅಕೌಂಟ್​ನಲ್ಲಿದ್ದ ಹಣ ಇಲ್ಲವಾದ ಬಳಿಕ ಶಾಕ್ ಆಗಿ ಮತ್ತೇ ಅದೇ ನಂಬರ್​ಗೆ ಹರೀಶ್​ ಕಾಲ್ ಮಾಡಿದ್ದಾರೆ. ಆದರೆ ಆ ನಂಬರ್ ಸ್ವಿಚ್ ಆಫ್ ಆಗಿದ್ದು, ತಕ್ಷಣ ಪೊಲೀಸರಿಗೆ ದೂರು ನೀಡಿದ್ದಾರೆ.

ದಕ್ಷಿಣ ಸಿಇಎನ್ ಠಾಣೆಯಲ್ಲಿ ಎಫ್​ಐಆರ್ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ. (ದಿಗ್ವಿಜಯ ನ್ಯೂಸ್​)