More

    ಗೇಮಿಂಗ್​ ಆ್ಯಪ್​ನಲ್ಲಿ ಹಣ ಕಳೆದುಕೊಂಡ ಕಾಲೇಜು ವಿದ್ಯಾರ್ಥಿ ಆತ್ಮಹತ್ಯೆ: ಡೆತ್​ನೋಟ್​ನಲ್ಲಿತ್ತು ಆ್ಯಪ್​ ಹೆಸರು!

    ಚೆನ್ನೈ: ಆನ್​ಲೈನ್​ ಗೇಮಿಂಗ್​ ಆ್ಯಪ್​ನಲ್ಲಿ ತನ್ನ ಉಳಿತಾಯದ ಹಣವನ್ನು ಕಳೆದುಕೊಂಡು ನೋವಿನಲ್ಲಿ 20 ವರ್ಷದ ಕಾಲೇಜು ವಿದ್ಯಾರ್ಥಿಯೊಬ್ಬ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಚೆನ್ನೈ ಟಿ.ಪಿ. ಛತ್ರಮ್​ ಏರಿಯಾದಲ್ಲಿ ಭಾನುವಾರ ನಡೆದಿದೆ.

    ಡೆತ್​ನೋಟ್​ ಪತ್ತೆಯಾಗಿದ್ದು, ಕಾಸ್ಟೋ ಕ್ಲಬ್​ ಆ್ಯಪ್​ನಲ್ಲಿ ಹಣವನ್ನು ಕಳೆದುಕೊಂಡೆನು. ಇದರಿಂದ ಖಿನ್ನತೆಗೆ ಒಳಗಾಗಿ ನೋವಿ ಸಹಿಸಲಾಗದೇ ಸಾಯುವ ನಿರ್ಧಾರ ಮಾಡಿದೆನು ಎಂದು ಬರೆದಿದ್ದಾನೆ.

    ಯುವಕರಲ್ಲಿನ ಆನ್‌ಲೈನ್ ಗೇಮಿಂಗ್ ಅಥವಾ ಜೂಜಿನ ಚಟವು ಕುಟುಂಬಗಳನ್ನು ಆರ್ಥಿಕ ತೊಂದರೆಗೆ ದೂಡುತ್ತಿದೆ. ಹೀಗಾಗಿ ಅವುಗಳನ್ನು ನಿಯಂತ್ರಿಸಲು ಕಾನೂನಿನ ಅಗತ್ಯವಿದೆ ಎಂದು ಮದ್ರಾಸ್ ಹೈಕೋರ್ಟ್‌ನ ಮಧುರೈ ಪೀಠವು ಇತ್ತಿಚೆಗಷ್ಟೇ ಅಭಿಪ್ರಾಯ ವ್ಯಕ್ತಪಡಿಸಿದ ಎರಡು ದಿನದ ಬೆನ್ನಲ್ಲೇ ವಿದ್ಯಾರ್ಥಿ ಸಾವಿಗೆ ಶರಣಾಗಿರುವುದು ದುರ್ದೈವದ ಸಂಗತಿಯಾಗಿದೆ.

    ಮೃತನ ಹೆಸರು ನಿತೀಶ್​ ಕುಮಾರ್​. ಈತ ಚೆನ್ನೈನ ಖಾಸಗಿ ಆರ್ಟ್ಸ್​ ಕಾಲೇಜಿನಲ್ಲಿ ಅಂತಿಮ ವರ್ಷದ ವಿದ್ಯಾರ್ಥಿಯಾಗಿದ್ದ. ಅಲ್ಲದೆ, ಅಮಿಂಜಿಕರೈನಲ್ಲಿರುವ ಟ್ಯಾಟೋ ಸ್ಟುಡಿಯೋದಲ್ಲಿ ಕೆಲಸ ಮಾಡುತ್ತಿದ್ದ. ಕೆಲಸ ಇದೆ ಎಂದು ಹೇಳಿ ಭಾನುವಾರ ಸಂಜೆ ಮನೆಯನ್ನು ತೊರೆದ ನಿತೀಶ್​, ರಾತ್ರಿ 10 ಗಂಟೆಯಾದರೂ ಬರಲಿಲ್ಲ. ಫೋನ್​ ಮಾಡಿದ್ರೂ ಸಂಪರ್ಕಕ್ಕೆ ಸಿಗಲಿಲ್ಲ. ಗಾಬರಿಗೊಂಡ ಕುಟುಂಬ ನೋಡಿಕೊಂಡು ಬರುವಂತೆ ನಿತೀಶ್​ ಕಿರಿಯ ಸಹೋದರನನ್ನು ಕಳುಹಿಸಿದರು.

    ಟ್ಯಾಟೋ ಸ್ಟುಡಿಯೋ ಹೊರಭಾಗದಲ್ಲಿ ಬೈಕ್​ ಪಾರ್ಕ್​ ಮಾಡಿರುವುದನ್ನು ಸಹೋದರ ನೋಡಿದ್ದಾನೆ. ಪಕ್ಕದಲ್ಲಿದ್ದ ಅಪಾರ್ಟ್​ಮೆಂಟ್​ನಲ್ಲಿ ನಿದ್ರೆಗೆ ಹೋಗಿರಬಹುದು ಎಂದು ಭಾವಿಸಿ ವಾಪಸ್​ ಮನೆಗೆ ಮರಳಿದ್ದಾನೆ. ಬೆಳಗ್ಗೆಯಾದರೂ ನಿತೀಶ್​ ಬರದಿದ್ದಾಗ ಕುಟುಂಬ ಚಿಂತೆಗೀಡಾಗಿ ಮತ್ತೆ ಆತನ ಫೋನ್​ಗೆ ಕರೆ ಮಾಡಿದ್ದಾರೆ. ಆದರೆ, ಸ್ವಿಚ್​ ಆಫ್​ ಕೇಳಿದೆ. ಬಳಿಕ ಎಲ್ಲರೂ ಟ್ಯಾಟೂ ಸ್ಟುಡಿಯೋ ಬಳಿ ತೆರಳಿದಾಗ ಆತ ಮೃತಪಟ್ಟಿರುವುದು ತಿಳಿದಿದೆ.

    ಟ್ಯಾಟೂ ಸ್ಥಳದಿಂದ 20 ಸಾವಿರ ಹಣವನ್ನು ತೆಗೆದುಕೊಂಡು ಹೋಗಿ ಗೇಮಿಂಗ್​ ಆ್ಯಪ್​ನಲ್ಲಿ ಕಳೆದುಕೊಂಡಿದ್ದಾಗಿ ಡೆತ್​ನೋಟ್​ನಲ್ಲಿ ಉಲ್ಲೇಖಿಸಿರುವ ನಿತೀಶ್​, ಕೆಲಸ ಮಾಡುವ ಸ್ಥಳದಲ್ಲಿ ಹಣ ತೆಗೆದುಕೊಂಡಿದ್ದಕ್ಕಾಗಿ ಮಾಲೀಕನ ಬಳಿ ಕ್ಷಮೆಯನ್ನು ಕೋರಿದ್ದಾನೆ. ಇದೀಗ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ. (ಏಜೆನ್ಸೀಸ್​)

    ಅಕ್ರಮ ಚಟುವಟಿಕೆ ಹಿನ್ನೆಲೆ ಬಹುಭಾಷಾ ನಟ ಶ್ಯಾಮ್​ ಬಂಧನ: ಮತ್ತಷ್ಟು ಕಲಾವಿದರಿಗೆ ಬಂಧನ ಭೀತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts