ಜಿಲ್ಲೆ

ಉಡುಪಿ ಅನಾಮಧೇಯ ಲಿಂಕ್ ತೆರೆದು ಲಕ್ಷಾಂತರ ರೂ. ಕಳೆದುಕೊಂಡರು

ಉಡುಪಿ: ಅನಾಮಧೇಯ ಲಿಂಕ್ ತೆರೆದು, ಕರೆ ಸ್ವೀಕರಿಸಿ ಹಾಗೂ ಅಧಿಕ ಹಣ ಗಳಿಕೆ ಆಸೆಗೆ ಬಿದ್ದ ಮಹಿಳೆ ಸೇರಿ ಮೂವರು ಲಕ್ಷಾಂತರ ರೂ. ಕಳೆದುಕೊಂಡ ಪ್ರತ್ಯೇಕ ಮೂರು ಘಟನೆ ಉಡುಪಿಯಲ್ಲಿ ನಡೆದಿದೆ.ನಿವೃತ್ತ ಬ್ಯಾಂಕ್ ಅಧಿಕಾರಿ ರಾಮಚಂದ್ರ ಜೆ.ಅಂಬಲಪಾಡಿ ಎಂಬುವರು ಮೇ 3ರಂದು ವಾಟ್ಸಪ್ ಗ್ರೂಪ್‌ಗೆ ಅನಾಮಧೇಯ ನಂಬರ್‌ನಿಂದ ಬಂದ ಲಿಂಕ್ ಕ್ಲಿಕ್ ಮಾಡಿದ್ದು, 1,08,646 ರೂ. ಕಳೆದುಕೊಂಡಿದ್ದಾರೆ.

ಪೌರೋಹಿತ್ಯ ಕೆಲಸ ಮಾಡಿಕೊಂಡಿರುವ 76 ಬಡಗಬೆಟ್ಟುವಿನ ಗಣೇಶ್ ಕೆ. ಎಂಬುವರ ಮೊಬೈಲ್‌ಗೆ ಬಂದ ಕರೆಯಂತೆ ಕೆವೈಸಿ ಅಪ್ಡೇಟ್‌ಗೆ ಒಟಿಪಿ ನಂಬರ್ ನೀಡಿದ್ದು, 1,90,000 ರೂ. ಕಳೆದುಕೊಂಡಿದ್ದಾರೆ.ಉದ್ಯಾವರ ಸಮೀಪದ ಕೊರಂಗ್ರಪಾಡಿಯ ಸೌಮ್ಯಾ ಸಿ.(39) ಎಂಬುವರು ಫೇಸ್‌ಬುಕ್‌ನಲ್ಲಿ ಬಂದಿದ್ದ ಆನ್‌ಲೈನ್ ಟ್ರೇಡಿಂಗ್ ಕುರಿತ ಲಿಂಕ್ ಓಪನ್ ಮಾಡಿದ್ದು, 2 ಲಕ್ಷ ರೂ. ಕಳೆದುಕೊಂಡಿದ್ದಾರೆ. ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.