ಜಿಲ್ಲೆ

ಅಪರಿಚಿತ ಶವದ ಗುರುತು ಪತ್ತೆ

ಇಂದಿರಾ ಎನ್ ಕೆ

ಗಂಗೊಳ್ಳಿ: ಕುಂದಾಪುರ ಸಮೀಪದ ಆನಗಳ್ಳಿ ಹೊಳೆಯಲ್ಲಿ ಶುಕ್ರವಾರ ಪತ್ತೆಯಾದ ಅಪರಿಚಿತ ಶವದ ಗುರುತು ಪತ್ತೆಯಾಗಿದ್ದು, ಮೃತಪಟ್ಟವರನ್ನು ಬಡಾಕೇರಿ ಗ್ರಾಮದ ಸಾತುಬೆಟ್ಟು ನಿವಾಸಿ ರಾಜು ಬಿ.(48) ಎಂದು ಗುರುತಿಸಲಾಗಿದೆ.

ಬೆಂಗಳೂರಿನಲ್ಲಿ ಕ್ಯಾಟರಿಂಗ್ ಕೆಲಸ ಮಾಡಿಕೊಂಡಿದ್ದ ರಾಜು ಬಿ. ಅವರು ಜೂನ್ 20ರಂದು ಊರಿಗೆ ಹೋಗಿ ಬರುವುದಾಗಿ ಬೆಂಗಳೂರಿನಿಂದ ಹೊರಟಿದ್ದರು. ರಾಜು ಅವರು ಕುಂದಾಪುರದ ಆನಗಳ್ಳಿಯ ನದಿಯ ಸಮೀಪಕ್ಕೆ ಹೋದವರು ಹೊಳೆಯ ನೀರಿಗೆ ಬಿದ್ದು ಮುಳುಗಿ ಮೃತಪಟ್ಟಿರಬಹುದು ಎಂದು ಅಶೋಕ ಎಂಬುವರು ನೀಡಿದ ದೂರಿನಂತೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.