ಜಾಲಹಳ್ಳಿ ಮುರಾರ್ಜಿ ವಸತಿ ಶಾಲೆಯಲ್ಲಿ ಸೆಪ್ಟಿಕ್ ಟ್ಯಾಂಕ್ ಮೇಲ್ಭಾಗದಲ್ಲಿ ನಿರ್ಮಿಸುತ್ತಿರುವುದು. 
ಜಿಲ್ಲೆ

ಅರೆಬರೆ ಕಾಮಗಾರಿ ಬಿಲ್‌ಗೆ ತರಾತುರಿ?

Kopala - Desk - Eraveni

ದೇವದುರ್ಗ: ತಾಲೂಕಿನ ಜಾಲಹಳ್ಳಿಯ ಮುರಾರ್ಜಿ ದೇಸಾಯಿ ವಸತಿ ಶಾಲೆಗೆ ಮೂಲಸೌಲಭ್ಯ ಕಲ್ಪಿಸಲು ಮಂಜೂರಾದ ಅನುದಾನದಲ್ಲಿ ಅವೈಜ್ಞಾನಿಕ ಹಾಗೂ ಅರೆಬರೆ ಕಾಮಗಾರಿ ಮಾಡಿದ್ದಲ್ಲದೆ ಬಿಲ್ ಪಾವತಿಗೆ ತರಾತುರಿ ನಡೆದಿದೆ ಎಂಬ ಆರೋಪಗಳು ಕೇಳಿಬರುತ್ತಿವೆ.

ಜಾಲಹಳ್ಳಿಯಲ್ಲಿ 1995-96ನೇ ಸಾಲಿನಲ್ಲಿ ಮುರಾರ್ಜಿ ವಸತಿ ಶಾಲೆ ಆರಂಭಿಸಲಾಗಿದೆ. 2003-04ರಲ್ಲಿ 16 ಎಕರೆ ಜಾಗದಲ್ಲಿ ಹೊಸ ಕಟ್ಟಡ ನಿರ್ಮಿಸಲಾಗಿದೆ. ಅಂದು ನೆಲದಡಿ ಕಟ್ಟಡ ನಿರ್ಮಿಸಲಾಗಿತ್ತು. 2005ರಲ್ಲಿ ನೀರಾವರಿ ಬಂದ ನಂತರ ಸುತ್ತಲೂ ಗದ್ದೆಗಳಾಗಿವೆ. ಇದರಿಂದ ಕಟ್ಟಡಕ್ಕಿಂತ ಜಮೀನು ಮೇಲ್ಭಾಗವಾಗಿ ಶಾಲೆಗೆ ಬಸಿನೀರಿನ ಸಮಸ್ಯೆ ಎದುರಾಗಿದೆ.

ಕಳೆದ ಆಗಸ್ಟ್‌ನಲ್ಲಿ ಸುರಿದ ಮಳೆಯಿಂದ ಶಾಲೆಗೆ ಸಂಪರ್ಕ ಕಲ್ಪಿಸುವ ಸೇತುವೆ ಕುಸಿದು ಕಟ್ಟಡ ನಡುಗಡೆಯಂತಾಗಿತ್ತು. ಹೀಗಾಗಿ ಶಾಲೆಗೆ ಮೂಲಸೌಲಭ್ಯ ಸೇರಿ ಸಮಸ್ಯೆ ಪರಿಹರಿಸಲು ಕರ್ನಾಟಕ ಗ್ರಾಮೀಣ ಸಂಪನ್ಮೂಲ ಅಭಿವೃದ್ಧಿ ನಿಗಮದಿಂದ 1.25 ಕೋಟಿ ರೂ. ಮಂಜೂರು ಮಾಡಲಾಗಿದೆ.

ಈ ಅನುದಾನದಲ್ಲಿ ಕುಡಿವ ನೀರಿನ ಟ್ಯಾಂಕ್ ನಿರ್ಮಾಣಕ್ಕೆ 25ಲಕ್ಷ ರೂ. ಸೆಪ್ಟಿಕ್ ಟ್ಯಾಂಕ್‌ಗೆ 10.50 ಲಕ್ಷ ರೂ., ಸೇತುವೆ ನಿರ್ಮಾಣಕ್ಕೆ 5.06ಲಕ್ಷ ರೂ., ಕಿಟಕಿ, ಬಾಗಿಲು, ವೆಂಟಿಲೇಟರ್‌ಗೆ 50ಲಕ್ಷ ರೂ., ವಿದ್ಯುತ್ ಕೆಲಸಕ್ಕೆ 26.80ಲಕ್ಷ ರೂ. ಹಾಗೂ ಪೈಪ್‌ಲೈನ್, ಸಾನಿಟರಿಸ್‌ಗೆ 7.50ಲಕ್ಷ ರೂ. ಸೇರಿ 1.25ಕೋಟಿ ರೂ. ಅನುದಾನ ನೀಡಲಾಗಿದೆ.

ಕುಡಿವ ನೀರಿನ ಹೇರ್‌ಟ್ಯಾಂಕ್ ಮೇಲ್ಭಾಗದಲ್ಲಿ ಮಾಡದೆ ನೆಲದಡಿ ಕಟ್ಟಲು ಮುಂದಾಗಿದ್ದಾರೆ. ಕಟ್ಟಡಕ್ಕಿಂತ ಕೆಳಭಾಗದಲ್ಲಿ ಸೆಪ್ಟಿಕ್ ಟ್ಯಾಂಕ್ ನಿರ್ಮಿಸಬೇಕು. ಆದರೆ, ನೆಲದ ಮೇಲೆ ಕಟ್ಟಲಾಗುತ್ತಿದೆ. ಶೌಚಗೃಹಕ್ಕಿಂತ ಸೆಪ್ಟಿಕ್ ಟ್ಯಾಂಕ್ ಮೇಲ್ಭಾಗದಲ್ಲಿದೆ. ಕಿಟಕಿ, ವೆಂಟಿಲೇಟರ್‌ಗಳಿಗೆ ಗಾಜಿನ ಗ್ಲಾಸ್ ಹಾಕದೆ ತಗಡು ಜೋಡಿಸಲಾಗುತ್ತಿದೆ. ಹಳೇ ಕಿಟಕಿ ಬಾಗಿಲೇ ರಿಪೇರಿ ಮಾಡಿ ಮರುಜೋಡಿಸಲಾಗುತ್ತಿದೆ. ವೆಂಟಿಲೇಟರ್‌ಗೆ 50ಲಕ್ಷ ರೂ. ಅನುದಾನವಿದ್ದರೂ ಹೊಸ ವಸ್ತುಗಳನ್ನು ಹಾಕಿಲ್ಲ ಎನ್ನುವ ಆರೋಪವಿದೆ.

ವಿದ್ಯುತ್ ಪೈಪ್, ವೈಯರ್ ಮರುಜೋಡಣೆಗೆ 26.80ಲಕ್ಷ ರೂ. ಅನುದಾನವಿದ್ದರೂ ಹೊಸದಾಗಿ ಕೆಲಸ ಮಾಡಿಲ್ಲ. ಹಳೇ ಪೈಪ್‌ನಲ್ಲೇ ವೈಯರ್ ಎಳೆಯುತ್ತಿದ್ದಾರೆ. ಕುಡಿವ ನೀರಿನ ಪೈಪ್, ಬಳಕೆ ನೀರು ಪೂರೈಕೆ ಮಾಡುವ ಪೈಪ್ ಸೇರಿ ಇತರ ದುರಸ್ತಿಗೊಳಿಸುವಲ್ಲಿ ಸರಿಯಾಗಿ ಕೆಲಸ ಮಾಡಿಲ್ಲ. ಸೇತುವೆ ಅರೆಬರೆ ಮಾಡಲಾಗಿದ್ದು, ಮಳೆಗೆ ಕೊಚ್ಚಿಹೋಗುವ ಆತಂಕವಿದೆ. 1.25ಕೋಟಿ ರೂ. ಅನುದಾನ ಬಂದರೂ ಗುಣಮಟ್ಟದಲ್ಲಿ ಕೆಲಸ ಮಾಡುತ್ತಿಲ್ಲ ಎಂದು ಪಾಲಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಶಿಕ್ಷಣ ಪ್ರೇಮಿ ಜಾಲಹಳ್ಳಿರಾಜಾವಾಸುದೇವ ನಾಯಕ ವಕೀಲಮುರಾರ್ಜಿ ಶಾಲೆಗೆ ಸೌಲಭ್ಯ ಕಲ್ಪಿಸಲು 1.25 ಕೋಟಿ ರೂ. ಅನುದಾನ ಬಂದರೂ ಗುಣಮಟ್ಟದಲ್ಲಿ ಕೆಲಸ ಮಾಡುತ್ತಿಲ್ಲ. ಹೇರ್‌ಟ್ಯಾಂಕ್‌ಗೆ 25ಲಕ್ಷ ರೂ. ಅನುದಾನವಿದ್ದರೂ ನೆಲದಲ್ಲಿ ಟ್ಯಾಂಕ್‌ಕಟ್ಟುವ ಹುನ್ನಾರ ನಡೆಸಿದ್ದಾರೆ. ಸೆಪ್ಟಿಕ್ ಟ್ಯಾಂಕ್ ಕಟ್ಟಡ ಬುನಾದಿಗಿಂತ ಮೇಲ್ಭಾಗದಲ್ಲಿ ಕಟ್ಟುತ್ತಿದ್ದಾರೆ. ಗುಣಮಟ್ಟದ ಕೆಲಸ ಮಾಡದಿದ್ದರೆ ಸಂಬಂಧಿಸಿದ ಇಲಾಖೆಗೆ ದೂರು ನೀಡುತ್ತೇನೆ. ಎಇ, ಕೆಆರ್‌ಐಡಿಬಿಹನುಮಯ್ಯಜಾಲಹಳ್ಳಿ ಮುರಾರ್ಜಿ ವಸತಿ ಶಾಲೆಗೆ ಮೂಲಸೌಲಭ್ಯ ಸೇರಿ ಇತರ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಲು ಅನುದಾನ ಬಿಡುಗಡೆಯಾಗಿದೆ. ಕಾಮಗಾರಿ ನಡೆಯುತ್ತಿದ್ದು, ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದೇನೆ. ಗುಣಮಟ್ಟದಿಂದ ಕಾಮಗಾರಿ ಮಾಡಲು ಹಾಗೂ ನೀಲಿನಕ್ಷೆ ಪ್ರಕಾರ ಕೆಲಸ ಕೈಗೊಳ್ಳಲು ಸೂಚನೆ ನೀಡಿರುವೆ.