ಜಿಲ್ಲೆ

ಭೂಗತ ಕೇಬಲ್ ಕಾಮಗಾರಿ ಪೂರ್ಣ: ಸದಾಶಿವ ಉಳ್ಳಾಲ್ ಮಾಹಿತಿ

Manikya M

ವಿಜಯವಾಣಿ ಸುದ್ದಿಜಾಲ ಉಳ್ಳಾಲ

ಜೆಪ್ಪು ವಿದ್ಯುತ್ ಉಪಕೇಂದ್ರದಿಂದ ಮೆಸ್ಕಾಂ ತೊಕೊಟ್ಟು ಉಪಕೆಂದ್ರಕ್ಕೆ 5.73 ಕೋಟಿ ರೂ. ವೆಚ್ಚದಲ್ಲಿ ಭೂಗತ ಕೇಬಲ್ ಅಳವಡಿಸುವ ಕಾಮಗಾರಿ ಮತ್ತು 1.54 ಕೋಟಿ ರೂ. ವೆಚ್ಚದಲ್ಲಿ ತೊಕೊಟ್ಟು ಉಪಕೆಂದ್ರದಲ್ಲಿ 5 ಎಂವಿಎ ಸಾಮರ್ಥ್ಯದ ಶಕ್ತಿ ಪರಿವರ್ತಕವನ್ನು, 12.2.2 ಪರಿವರ್ತಕಕ್ಕೆ ಉನ್ನತೀಕರಿಸುವ ಕಾಮಗಾರಿ ಪೂರ್ಣಗೊಂಡಿದ್ದು, ಮಾ.8ರಂದು ಪರೀಕ್ಷಾರ್ಥ ಚಾಲನೆಗೊಳ್ಳಲಿದೆ. ಸ್ಪೀಕರ್ ಯು.ಟಿ.ಖಾದರ್ ಭಾಗವಹಿಸುವರು ಎಂದು ಮುಡಾ ಅಧ್ಯಕ್ಷ ಸದಾಶಿವ ಉಳ್ಳಾಲ್ ತಿಳಿಸಿದರು.

ಕಾಮಗಾರಿಯಿಂದ ಉಳ್ಳಾಲ, ಸೋಮೆಶ್ವರ, ಕೋಟೆಕಾರ್, ಮುನ್ನೂರು, ಅಂಬ್ಲಮೊಗರು ಪ್ರದೇಶದಲ್ಲಿ ಉತ್ತಮ ಗುಣಮಟ್ಟದ ವಿದ್ಯುತ್ ಸರಬರಾಜು ವ್ಯವಸ್ಥೆ ಲಭ್ಯವಾಗಲಿದೆ. ಉಳ್ಳಾಲ ತಾಲೂಕು ವ್ಯಾಪ್ತಿಯಲ್ಲಿ ಬರುವ ಸಜೀಪನಡು, ಸಜಿಪಪಡು ನರಿಂಗಾನ, ಮುಡಿಪು, ಗ್ರಾಮಗಳು ಈ ಹಿಂದೆ ಮೆಸ್ಕಾಂ ಬಂಟ್ವಾಳ ವ್ಯಾಪ್ತಿಯಲ್ಲಿದ್ದು ಈ ಗ್ರಾಮಗಳನ್ನೊಳಗೊಂಡು ಉಳ್ಳಾಲ ತಾಲೂಕಿನ ಅಸೈಗೋಳಿಯಲ್ಲಿ ಹೊಸದಾಗಿ ಕೊಣಾಜೆ ಉಪವಿಭಾಗ ಕಾರ್ಯಾರಂಭಗೊಂಡಿದೆ. ಹೊಸದಾಗಿ ಬೋಳಿಯಾರ್, ಕಿನ್ಯಾ ಮತ್ತು ಸೋಮೇಶ್ವರ ಶಾಖೆ ಹಾಗೂ ಕಚೇರಿಗಳಿಗೆ ಹೆಚ್ಚುವರಿ ಇಂಜಿನಿಯರ್, ಪವರ್‌ಮ್ಯಾನ್‌ಗಳು, ಹೆಚ್ಚುವರಿ 24್ಠ7 ವಿದ್ಯುತ್ ಸೇವಾ ಕೇಂದ್ರ ಮತ್ತು ಹೆಚ್ಚುವರಿ ಸೇವಾ ಕೇಂದ್ರಕ್ಕೆ ವಾಹನ ಮಂಜೂರಾತಿಗೊಂಡು ಕಾರ್ಯಾರಂಭಗೊಂಡಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಹೊಸದಾಗಿ ಪ್ರಾರಂಭಗೊಂಡಿರುವ ಕೊಣಾಜೆ ಉಪವಿಭಾಗದಲ್ಲಿ ಮುಡಿಪು, ನರಿಂಗಾನ, ಕೈರಂಗಳ, ಪಜೀರ್, ಬಾಳೆಪುಣಿ ಮತ್ತು ಕುರ್ನಾಡ್, ಬೋಳಿಯಾರ್ ಶಾಖೆಯಲ್ಲಿ ಸಜೀಪನಡು, ಸಜಿಪಪಡು, ಬೋಳಿಯಾರ್ ಗ್ರಾಮಗಳು ಹೊಸ ಬೋಳಿಯಾರ್ ಶಾಖಾ ವ್ಯಾಪ್ತಿಗೊಳಪಟ್ಟಿದೆ. ಕೊಣಾಜೆ ಶಾಖೆಯಲ್ಲಿ ಹರೇಕಳ, ಕೊಣಾಜೆ ಮತ್ತು ಪಾವೂರು ಗ್ರಾಮಗಳು ಒಳಪಟ್ಟಿವೆ.

ಕಿನ್ಯಾ ಶಾಖೆ ಹೊಸದಾಗಿ ಮಂಜೂರಾತಿಗೊಂಡ ಶಾಖೆಯಾಗಿದ್ದು ಕಿನ್ಯಾ ಮತ್ತು ಮಂಜನಾಡಿ ಗ್ರಾಮ ವ್ಯಾಪ್ತಿಗೊಳಪಡುತ್ತದೆ. ನೂತನ ಕೋಟೆಕಾರ್ ಉಪಕೇಂದ್ರದ ಕಾಮಗಾರಿಯೂ ಪೂರ್ಣಗೊಂಡಿದ್ದು ಸಭಾಪತಿಗಳು ಪರೀಕ್ಷಾರ್ಥ ಚಾಲನೆಗೊಳಿಸಲಿದ್ದಾರೆ ಎಂದರು.

ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಶೆಟ್ಟಿ ಬೋಳಿಯಾರ್, ನಗರಾಧ್ಯಕ್ಷ ಮುಸ್ತಫಾ ಅಬ್ದುಲ್ಲಾ, ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ದಿನೇಶ್ ರೈ, ಮುಖಂಡರಾದ ಮನ್ಸೂರ್ ಮಂಚಿಲ, ಅಶ್ರಫ್ ಕೆ.ಸಿ.ರೋಡು, ಪೀಯುಸ್ ಡಿಸೋಜ ಸುದ್ದಿಗೋಷ್ಠಿಯಲ್ಲಿದ್ದರು.