ಕಾಸರಗೋಡು: ಕುಂಬಳೆ ಪೊಲೀಸ್ ಠಾಣೆ ವ್ಯಾಪ್ತಿಯ ಹೊಳೆಗಳಿಂದ ಅನಧಿಕೃತವಾಗಿ ಮರಳು ಸಂಗ್ರಹಿಸುತ್ತಿದ್ದ 12 ಮಂದಿ ಇತರ ರಾಜ್ಯ ಕಾರ್ಮಿಕರನ್ನು ಪೊಲೀಸರು ಬಂಧಿಸಿದ್ದಾರೆ. ಪೇರಾಲ್ ಕಣ್ಣೂರು ರಸ್ತೆಯ ಕ್ವಾಟ್ರಸ್ ಒಂದರಲ್ಲಿ ವಾಸ್ತವ್ಯ ಹೂಡಿರುವ ಬಿಹಾರ್, ಉತ್ತರಪ್ರದೇಶ ನಿವಾಸಿಗಳಾದ ಸುಭಾಷ್‌ಬಿನ್, ಜಿತ್ತು, ಉಮೇಶ್, ಧರ್ಮೇಂದ್ರ, ಅಮರ್‌ಜಿತ್, ಅರುಣ್, ಮಣಿರಾಜ್ ಕುಮಾರ್, ದೀಪಕ್ ಕುಮಾರ್, ನಾಗೇಂದ್ರ, ನಿಶಾದ್, ಮಣಿಲಾಲ್ ಹಾಗೂ ವಿನೋದ್ ಬಂಧಿತರು. ಹೊಳೆಗಳಿಂದ ಅನಧಿಕೃತವಾಗಿ ಮರಳು ಸಂಗ್ರಹಿಸುತ್ತಿರುವ ಕೃತ್ಯ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪೊಲೀಸರು ನಾಡಿದ ಕಾರ್ಯಾರಣೆಯಲ್ಲಿ ಇತರ ರಾಜ್ಯ ಕಾರ್ಮಿಕರು ದಂಧೆಯಲ್ಲಿ ಶಾಮೀಲಾಗಿರುವುದು ಪತ್ತೆಯಾಗಿದೆ. ಇವರ ಹಿಂದೆ ಮಧ್ಯವರ್ತಿಗಳು ಕಾರ್ಯಾಚರಿಸುತ್ತಿರುವ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.