ತಾಲೂಕು ಮಟ್ಟದ ಖೋ ಖೋ ಪಂದ್ಯಾಟ ಬಾಲಕಿಯ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದ ಪಿಆರ್​ಎನ್​ ಅಮೃತ ಭಾರತಿ ಪ.ಪೂ ಕಾಲೇಜು ವಿದ್ಯಾರ್ಥಿಗಳು. 
ಉಡುಪಿ

ಕ್ರೀಡೆಯಿಂದ ಶಿಸ್ತು, ಸಂಯಮದ ಪಾಠ

ಖೋ ಖೋ ಪಂದ್ಯಾಟ ಉದ್ಘಾಟಿಸಿ ಯೋಗಿಶ್​ ಭಟ್​ ಅಭಿಮತ

ಹೆಬ್ರಿ: ಕ್ರೀಡೆ ಶಿಸ್ತು ಮತ್ತು ಸಂಯಮದ ಪಾಠ ಕಲಿಸುತ್ತದೆ. ಕ್ರೀಡೆ ನಮ್ಮ ಇತಿಮಿತಿಗಳನ್ನು ಪರಿಚಯಿಸುತ್ತದೆ ಎಂದು ಹಾಸ್ಟೆಲ್​ ಕಮಿಟಿ ಗೌರವಾಧ್ಯಕ್ಷ ಯೋಗಿಶ್​ ಭಟ್​ ಹೇಳಿದರು.

ಪಾಂಡುರಂಗ ರಮಣ ನಾಯಕ್​ ಅಮೃತ ಭಾರತಿ ಪದವಿ ಪೂರ್ವ ಕಾಲೇಜಿನಲ್ಲಿ ಸಾರ್ವಜನಿಕ ಶಾಲಾ ಶಿಕ್ಷಣ ಇಲಾಖೆ ಪದವಿ ಪೂರ್ವ ಕಾಲೇಜು ಉಡುಪಿ ವತಿಯಿಂದ ಹೆಬ್ರಿ ಪದವಿ ಪೂರ್ವ ಕಾಲೇಜಿನ ತಾಲೂಕು ಮಟ್ಟದ ಖೋ ಖೋ ಪಂದ್ಯಾಟ ಉದ್ಘಾಟಿಸಿ ಮಾತನಾಡಿದರು.

ಅಮೃತ ಭಾರತಿ ಪ.ಪೂ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಎಚ್​.ರಾಜೇಶ್​ ನಾಯಕ್​, ಟ್ರಸ್ಟಿ ಸುಧೀರ್​ ನಾಯಕ್​, ಪ್ರಾಂಶುಪಾಲ ಪ್ರಕಾಶ್​ ಜೋಗಿ, ಹೆಬ್ರಿ ತಾಲೂಕು ಕ್ರೀಡಾ ಸಂಯೋಜಕ ವಿಜಯ್​ ಕುಮಾರ್​ ಶೆಟ್ಟಿ, ಸರ್ಕಾರಿ ಪ.ಪೂ ಕಾಲೇಜಿನ ಪ್ರಾಂಶುಪಾಲ ವಿಜಯ್​, ಉಪನ್ಯಾಸಕರಾದ ಬಲರಾಮ ಮತ್ತು ಶ್ರುತಿ, ತೀರ್ಪುಗಾರರಾದ ವಸಂತ್​, ಶಂಕರ್​ ನಾಯ್ಕ್​, ಪ್ರಶಾಂತ್​ ಉಪಸ್ಥಿತರಿದ್ದರು.

ಬಾಲಕರ ವಿಭಾಗದಲ್ಲಿ ಹೆಬ್ರಿ ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರಶಸ್ತಿ ಗಳಿಸಿತು. ಹೆಬ್ರಿ ಪಿಆರ್​ಎನ್​ ಅಮೃತ ಭಾರತಿ ಪ.ಪೂ ಕಾಲೇಜು ರನ್ನರ್​ ಅಪ್​ ಪ್ರಶಸ್ತಿ ಪಡೆಯಿತು. ಬಾಲಕಿಯರ ವಿಭಾಗದಲ್ಲಿ ಹೆಬ್ರಿ ಪಿಆರ್​ಎನ್​ ಅಮೃತ ಭಾರತಿ ಪ.ಪೂ. ಕಾಲೇಜು ಪ್ರಶಸ್ತಿ ಗಳಿಸಿತು. ಹೆಬ್ರಿ ಸರ್ಕಾರಿ ಪದವಿ ಪೂರ್ವ ಕಾಲೇಜು ರನ್ನರ್​ ಅಪ್​ ಪ್ರಶಸ್ತಿ ಪಡೆಯಿತು.