ಜಿಲ್ಲೆ

ಬೆಣ್ಣೆಹೊಳೆ ಫಾಲ್ಸ್​ ಬಳಿ ಕೊಳೆತ ಸ್ಥಿತಿಯಲ್ಲಿ ಪ್ರೇಮಿಗಳಿಬ್ಬರ ಮೃತದೇಹ ಪತ್ತೆ..!

ಶಿರಸಿ: ಮನೆಯಲ್ಲಿ ವಿವಾಹಕ್ಕೆ ಒಪ್ಪಿಗೆ ಸಿಗದ ಕಾರಣಕ್ಕೆ ಪ್ರೇಮಿಗಳಿಬ್ಬರೂ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಬೆಣ್ಣೆಹೊಳೆ ಫಾಲ್ಸ್ ಬಳಿ ನಡೆದಿದೆ.

ಬೊಮ್ಮನಕೊಡ್ಲುವಿನ ವಿಕ್ರಮ ಮಾವಿನಕುರ್ವೆ (28) ಹಾಗೂ ತೆರಕನಹಳ್ಳಿಯ ಮೇಘನಾ ನಾಯ್ಕ (27) ಆತ್ಮಹತ್ಯೆ ಮಾಡಿಕೊಂಡ ಪ್ರೇಮಿಗಳಾಗಿದ್ದಾರೆ. ನಾಲ್ಕೈದು ದಿನಗಳ ಹಿಂದೆ ಇವರು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದ್ದು, ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಸಿಪಿಐ ಪ್ರದೀಪ ಬಿ.ಯು. ಸ್ಥಳ ಪರಿಶೀಲಿಸಿದ್ದು, ಗ್ರಾಮೀಣ ಠಾಣೆ ಪಿಎಸ್​ಐ ನಂಜಾ ನಾಯ್ಕ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.