ಜಿಲ್ಲೆ

ಖಾಸಗಿ ಅಂಗ ತೋರಿಸಿ ಮಹಿಳೆ ಜತೆ ಉಬರ್​ ಚಾಲಕನ ಅನುಚಿತ ವರ್ತನೆ

Webdesk - Manjunatha B

ಬೆಂಗಳೂರು: ಮಹಿಳಾ ಪ್ರಯಾಣಿಕರೊಟ್ಟಿಗೆ ಉಬರ್​ ಚಾ;ಕ ಅಸಭ್ಯವಾಗಿ ವರ್ತಿಸಿ ತನ್ನ ಗುಪ್ತಾಂಗ ತೋರಿಸಿ ವಿಕೃತಿ ಮೆರೆದಿರುವ ಘಟನೆ ನಗರದ ಬಿಟಿಎಂ ಲೇಔಟ್​ 2ನೇ ಹಂತದಲ್ಲಿ ನಡೆದಿದೆ.

ಬಿಟಿಎಂ 2ನೇ ಹಂತದಿಂದ ಜೆಪಿನಗರ ಮೆಟ್ರೋ ಸ್ಟೇಷನ್​ವರೆಗೆ ಕ್ಯಾಬ್​ ಬುಕ್​ ಮಾಡಿದ್ದ, ಮಹಿಳೆ ಜೊತೆ ಚಾಲಕ ಅನುಚಿತವಾಗಿ ವರ್ತಿಸಿದ್ದನ್ನು ಆಕೆ ಲಿಂಕ್ಡ್​ಇನ್​​ನಲ್ಲಿ ಪೋಸ್ಟ್​ ಹಾಕಿ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದರು.

ಘಟನೆಯ ಹಿನ್ನಲೆ?

ಬುಧವಾರ ತಡರಾತ್ರಿ ಮಹಿಳೆ ಬಿಟಿಎಂ 2ನೇ ಹಂತದಿಂದ ಜೆಪಿನಗರ ಮೆಟ್ರೋ ಸ್ಟೇಷನ್​ವರೆಗೆ ಉಬರ್​ ಕ್ಯಾಬ್​ ಬುಕ್​ ಮಾಡಿದ್ಧಾರೆ. ಕ್ಯಾಬ್​ ಏರಿದ ಬಳಿಕ ಮೊದಲಿಗೆ ಚಾಲಕ ರೂಟ್​ ಬದಲಿಸಿದ್ದಾನೆ. ಈ ವೇಳೆ ಮಹಿಳೆ ಆತನಿಗೆ ಸರಿಯಾದ ಮಾರ್ಗದಲ್ಲಿ ಹೋಗುವಂತೆ ಹೇಳಿದ್ಧಾಳೆ.

ಸರಿಯಾದ ರೂಟ್​ ಅನುಸರಿಸಿದ ಚಾಲಕನ ನಡೆ ಮೇಲೆ ಅನುಮಾನಗೊಂಡ ಮಹಿಳೆ ಅರ್ಧ ದಾರಿಯಲ್ಲೆ ಇಳಿದಿದ್ಧಾರೆ. ಉಬರ್​ ಚಾಲಕನಿಗೆ ಹಣ ಪಾವತಿ ಮಾಡಿದ್ದಾಳೆ. ಈ ವೇಳೆ ಮಹಿಳೆಗೆ ಚಾಲಕ ತನ್ನ ಗುಪ್ತಾಂಗವನ್ನು ತೋರಿಸಿ ಅಸಭ್ಯವಾಗಿ ವರ್ತಿಸಿದ್ಧಾನೆ. ಇದರಿಂದ ಗಾಬರಿಗೊಂಡ ಯುವತಿ ಸ್ಥಳದಿಂದ ಓಡಿ ಹೋಗಿದ್ಧಾರೆ.

ಕೆಲ ಹೊತ್ತಿನ ಬಳಿಕ ನಡೆದ ಘಟನೆ ಕುರಿತು ಮಹಿಳೆ ಲಿಂಕ್ಡ್​ಇನ್​ ಉಬರ್​ ಕಂಪನಿಯವರಿಗೆ ದೂರು ಕೊಟ್ಟಿದ್ದಾರೆ. ಯುವತಿ ದೂರಿಗೆ ಪ್ರತಿಕ್ರಿಯಿಸಿರುವ ಸಂಸ್ಥೆ ಆತನ ವಿರುದ್ಧ ಕ್ರಮ ಜರುಗಿಸಿರುವುದಾಗಿ ತಿಳಿಸಿದೆ.