ಬೆಳಗಾವಿ: ಕಾಲೇಜು ಯುವತಿಯೊಬ್ಬಳ ವಿಚಾರವಾಗಿ ವಿದ್ಯಾರ್ಥಿಗಳಿಬ್ಬರ ನಡುವೆ ಹೊಡೆದಾಟ ನಡೆದಿದ್ದು, ಇಬ್ಬರಿಗೂ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ನಗರದ ಖಾಸಗಿ ಖಾಸಗಿ ಕಾಲೇಜೊಂದರ ವಿದ್ಯಾರ್ಥಿಗಳು ಕಾಲೇಜು ರಸ್ತೆಯ ಮಧ್ಯೆ ವಿದ್ಯಾರ್ಥಿನಿಯೊಬ್ಬಳ ವಿಚಾರವಾಗಿ ಗಲಾಟೆ ಮಾಡಿಕೊಂಡಿದ್ದಾರೆ. ಇಬ್ಬರ ನಡುವೆ ಘರ್ಷಣೆ ಉಂಟಾಗಿ ಒಬ್ಬನ ತಲೆಗೆ ತೀವ್ರ ಗಾಯಗಳಾಗಿವೆ, ಮತ್ತೊಂದು ಗುಂಪಿನ ವಿದ್ಯಾರ್ಥಿಗೂ ಗಾಯಗಳಾಗಿದ್ದು, ಗಾಯಾಳುಗಳನ್ನು ಬಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಸಂಬಂಧ ಕ್ಯಾಂಪ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ. ಇವತ್ತು ಸಾಯಂಕಾಲ ಕಾಲೇಜು ಹುಡುಗರು ತಮ್ಮತಮ್ಮಲ್ಲಿಯೇ ಗಲಾಟೆ ಮಾಡಿಕೊಂಡಿದ್ದು, ಇಬ್ಬರೂ ಒಂದೇ ಜನಾಂಗಕ್ಕೆ ಸೇರಿದವರಾಗಿರುತ್ತಾರೆ. ಅವರ ಮೇಲೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ಡಿಸಿಪಿ ರವೀಂದ್ರ ತಿಳಿಸಿದ್ದಾರೆ.