ಉಡುಪಿ: ದನದ ಕೊಟ್ಟಿಗೆಯಲ್ಲಿ ಜೋಡಿ ಹೆಬ್ಬಾವು ಮತ್ತು 31 ಮೊಟ್ಟೆಗಳು ಉಡುಪಿಯ ಕಟಪಾಡಿಯಲ್ಲಿ ಸಿಕ್ಕಿವೆ.
ಕಟಪಾಡಿ ವಿಶ್ವನಾಥ ಕ್ಷೇತ್ರ ಸಮೀಪ ರಾಮಚಂದ್ರ ಪೈ ಎಂಬವರ ಹಳೆಯ ಹಟ್ಟಿ ಕೊಟ್ಟಿಗೆಯಲ್ಲಿ ಒಂದು ಹೆಬ್ಬಾವು 16 ಮೊಟ್ಟೆಗಳಿಗೆ ಕಾವು ಕೊಡುತ್ತಿತ್ತು. ಇದನ್ನು ಗಮನಿಸಿದ ರಾಮಚಂದ್ರ ಪೈಗಳು ಉರಗ ತಜ್ನರಾದ ಮನು ಪೈ ಅವರಿಗೆ ವಿಷಯ ತಿಳಿಸಿದ್ದಾರೆ.
ಮನು ಪೈ ಸ್ಥಳಕ್ಕಾಗಮಿಸಿದಾಗ ಅಲ್ಲೇ ಇನ್ನೊಂದು ಹೆಬ್ಬಾವು 15 ಮೊಟ್ಟೆಗಳಿಗೆ ಕಾವು ಕೊಡುತ್ತಿದ್ದುದು ಗಮನಕ್ಕೆ ಬಂದಿದೆ. ಬಳಿಕ ಅರಣ್ಯ ಅಧಿಕಾರಿಗಳಿಗೆ ವಿಷಯ ಮುಟ್ಟಿಸಿದ್ದಾರೆ.
ಮನು ಪೈಯವರು ಎರಡು ಹೆಬ್ಬಾವು ಮತ್ತು ಮೊಟ್ಟೆಗಳನ್ನು ಸುರಕ್ಷಿತವಾಗಿ ತೆಗೆದು ಅರಣ್ಯಾಧಿಕಾರಿಗಳಿಗೆ ಹಸ್ತಾಂತರಿಸಿದ್ದಾರೆ. ಅರಣ್ಯಾಧಿಕಾಗಳು ಮೊಟ್ಟೆ ಮತ್ತು ಹೆಬ್ಬಾವುಗಳನ್ನು ಪಿಲಾರು ಅರಣ್ಯ ಪ್ರದೇಶದಲ್ಲಿ ಸುರಕ್ಷಿತವಾಗಿ ಬಿಟ್ಟಿದ್ದಾರೆ. (ದಿಗ್ವಿಜಯ ನ್ಯೂಸ್)