ಪಡುಬಿದ್ರಿ: ಮಟ್ಕಾ ಜುಗಾರಿ ಆಟ ಆಡಿಸುತ್ತಿದ್ದ ಹೆಜಮಾಡಿ ಗ್ರಾಮದ ಚಂದ್ರ ಹಾಗೂ ನಡ್ಸಾಲು ಗ್ರಾಮದ ಮುರಳೀಧರ ಎಂಬುವರನ್ನು ಪಡುಬಿದ್ರಿ ಪೊಲೀಸರು ಮಂಗಳವಾರ ರಾತ್ರಿ ಪಡುಬಿದ್ರಿ ಮಾರುಕಟ್ಟೆ ಬಳಿ ವಶಕ್ಕೆ ಪಡೆದಿದ್ದಾರೆ. ಆರೋಪಿಗಳು ಮನೋಜ್ ಎಂಬಾತನ ಆಣತಿಯಂತೆ ಹಣ ಸಂಗ್ರಹಿಸುತ್ತಿರುವುದಾಗಿ ತಿಳಿಸಿದ್ದು, ಅವರಿಂದ ಆಟಕ್ಕೆ ಸಂಗ್ರಹಿಸಿದ್ದ 1835 ರೂ. ನಗದು, ಮೊಬೈಲ್ ಹಾಗೂ ಇತರ ಸೊತ್ತು ಜಪ್ತಿ ಮಾಡಿದ್ದಾರೆ. 3 ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದೆ.