ಜಿಲ್ಲೆ

Car-ಟಿಪ್ಪರ್​ ನಡುವೆ ಭೀಕರ ಅಪಘಾತ; ತೆಲಂಗಾಣದಲ್ಲಿ ರಾಯಚೂರು ಮೂಲದ ಇಬ್ಬರು ಸಾವು

Webdesk - Manjunatha B

ರಾಯಚೂರು: ಕಾರು (Car) ಮತ್ತು ಟಿಪ್ಪರ್​ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ರಾಯಚೂರು ಮೂಲದ ಇಬ್ಬರು ಮೃತಪಟ್ಟಿರುವ ಘಟನೆ ತೆಲಂಗಾಣದ ಮಹಿಬೂಬ್​ನಗರ ಜಿಲ್ಲೆಯಲ್ಲಿ ನಡೆದಿದೆ.

ಮೃತರನ್ನು ಲಿಂಗಸುಗೂರು ಮೂಲದ ಬಸವರಾಜ್ ನಂದಿಕೋಲಮಠ (56),ಜಂಗಮ ಮೂರ್ತಿ(55)  ಎಂದು ಗುರುತಿಸಲಾಗಿದೆ.

ತೆಲಂಗಾಣದ ಮಹಿಬೂbffನಗರ ಜಿಲ್ಲೆಯ ಕೊಲ್ಲಿಪಾಕಿಯಿಂದ ಮರಳುವಾಗ ಅಪಘಾತ ಸಂಭವಿಸಿದ್ದು, ಮಹಿಬೂಬ್​ನಗರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವಿಚಾರ ತಿಳಿದು ಸ್ಥಳಕ್ಕೆ ದೌಡಾಯಿಸಿದ ಅಧಿಕಾರಿಗಳು ಮೃತರ ಕುಟುಂಬಸ್ಥರಿಗೆ ವಿಚಾರ ತಿಳಿಸಿ ಮೃತದೇಹಗಳನ್ನು ಮರಣೊತ್ತರ ಪರೀಕ್ಷೆಗೆ ರವಾನಿಸಿದ್ದಾರೆ.