ಕಾಸರಗೋಡು: ಎಂಡಿಎಂಎ ಜತೆ ಇಬ್ಬರು ಕಾಸರಗೋಡು ಯುವಕರನ್ನು ಬಂಧಿಸಲಾಗಿದೆ. ಕೂಡ್ಲು ಇಸ್ಸಾತ್ ನಗರದ ಟಿ.ಕಬೀರ್ (37) ಹಾಗೂ ಮಧೂರಿನ ಹಿದಾಯತ್ ನಗರದ ಕರಿಂಪಿಲದ ಕೆ.ಬಿ.ಅಹ್ಮದ್ ಅನೀಸ್(37) ಎಂಬುವರನ್ನು ನಗರ ಎಸ್‌ಐ ಪ್ರದೀಶ್ ಕುಮಾರ್ ಮತ್ತು ತಂಡ ಬಂಧಿಸಿದೆ. ಕೂಡ್ಲು, ಗಣೇಶ್ ನಗರದ ಬಸ್ ನಿಲ್ದಾಣದ ಮುಂಭಾಗ ಅನುಮಾನಾಸ್ಪದವಾಗಿ ಕಂಡುಬಂದ ಕಾರಿನಲ್ಲಿ 1.24 ಗ್ರಾಂ ಎಂಡಿಎಂಎ ವಶಪಡಿಸಿಕೊಳ್ಳಲಾಗಿದೆ. ಡ್ರಗ್ಸ್ ಅನ್ನು ಪ್ಲಾಸ್ಟಿಕ್ ಕವರ್‌ನಲ್ಲಿ ಸಂಗ್ರಹಿಸಿರುವುದು ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.