ಯಲಬುರ್ಗಾ ತಹಸಿಲ್ ಕಚೇರಿ ಆವರಣ ದಲಿತ ಸಂಘಟನೆಗಳು ಕೈಗೊಂಡಿರುವ ಅನಿರ್ದಿಷ್ಟಾವಧಿ ಧರಣಿ ಶುಕ್ರವಾರವೂ ಮುಂದುವರಿಯಿತು. ಪ್ರಮುಖರಾದ ಯಮನೂರಪ್ಪ ನಡುಲಮನಿ, ಹನಮಂತಪ್ಪ ಹೊಸಳ್ಳಿ, ಪರಸಪ್ಪ ಹರಿಜನ, ಅಶೋಕ ಮಾದರ, ಸಿದ್ದಪ್ಪ ಮಾದರ, ಸಿದ್ದಪ್ಪ ಛಲವಾದಿ, ಪ್ರಕಾಶ ಛಲವಾದಿ, ಶಾಂತವ್ವ ಹರಿಜನ, ಶೀಲಿಂಗವ್ವ ಹರಿಜನ, ಯಮನೂರಪ್ಪ ಮಾದರ ಇತರರಿದ್ದರು. 
ಜಿಲ್ಲೆ

ಎರಡು ದಿನಗಳಾದರು ಸ್ಪಂದಿಸದ ಅಧಿಕಾರಿಗಳು

Kopala - Desk - Eraveni

ಯಲಬುರ್ಗಾ: ತಾಲೂಕಿನ ಶಿರಗುಂಪಿಯ ಸರ್ವೇ ನಂ.57ರ 14.22 ಎಕರೆ ಜಮೀನಿನ ಪಹಣಿ ಯಥಾಸ್ಥಿತಿ ಕಾಪಾಡುವಂತೆ ಒತ್ತಾಯಿಸಿ ಪಟ್ಟಣ ತಹಸಿಲ್ ಕಚೇರಿ ಆವರಣದಲ್ಲಿ ದಲಿತ ಸಂಘಟನಾ ಸಮಿತಿ ಭೀಮ ಘರ್ಜನೆ ಹಾಗೂ ಗ್ರಾಮದ ದಲಿತ ಭೂರಕ್ಷಣಾ ಸಮಿತಿಯಿಂದ ನಡೆಯುತ್ತಿರುವ ಅನಿರ್ದಿಷ್ಟಾವಧಿ ಧರಣಿ ಶುಕ್ರವಾರ ಎರಡನೇ ದಿನಕ್ಕೆ ಕಾಲಿಟ್ಟಿತು.

ಕಳೆದ 70 ವರ್ಷಗಳಿಂದ ದಲಿತ ಕುಟುಂಬಗಳು ಕಬ್ಜಾವಹಿವಾಟು ಹೊಂದಿ ಯಾರದೇ ಅಡತಡೆ ಇಲ್ಲದೆ ಸಾಗುವಳಿ ಮಾಡಿಕೊಂಡು ಬಂದಿವೆ. ಜಮೀನು ದಲಿತ ಕುಟುಂಬಗಳಿಗೆ ಆಧಾರವಾಗಿದ್ದು, ಇದರ ಪಹಣಿ ಯಥಾಸ್ಥಿತಿ ಕಾಯುವಂತೆ ಅಧಿಕಾರಿಗಳಿಗೆ ತಿಳಿಸಿದರೂ ಪ್ರಯೋಜನವಾಗಿಲ್ಲ.

ಇದರಿಂದ ಅನ್ಯಾಯವಾಗಿದೆ. ಯಾವುದೇ ಕಾರಣಕ್ಕೂ ಬೇಡಿಕೆ ಈಡೇರುವವರೆಗೂ ಸತ್ಯಾಗ್ರಹ ಕೈಬಿಡುವುದಿಲ್ಲ. ಗುರುವಾರ ಬೆಳಗ್ಗೆಯಿಂದ ರಾತ್ರಿಯಿಡೀ ತಹಸಿಲ್ ಕಚೇರಿ ಆವರಣದಲ್ಲಿ ಅಹೋರಾತ್ರಿ ಹೋರಾಟ ಮುಂದುವರಿದಿದೆ. ಇದೂವರೆಗೂ ಯಾವುದೇ ಅಧಿಕಾರಿಗಳು ನಮ್ಮ ಜತೆ ಮಾತುಕತೆ ನಡೆಸಿಲ್ಲ. ನಮಗೆ ನ್ಯಾಯ ಸಿಗಬೇಕು ಎಂದು ಒತ್ತಾಯಿಸಿದರು.

ಪ್ರಮುಖರಾದ ಯಮನೂರಪ್ಪ ನಡುಲಮನಿ, ಹನಮಂತಪ್ಪ ಹೊಸಳ್ಳಿ, ಪರಸಪ್ಪ ಹರಿಜನ, ಅಶೋಕ ಮಾದರ, ಸಿದ್ದಪ್ಪ ಮಾದರ, ಸಿದ್ದಪ್ಪ ಛಲವಾದಿ, ಪ್ರಕಾಶ ಛಲವಾದಿ, ಶಾಂತವ್ವ ಹರಿಜನ, ಶೀಲಿಂಗವ್ವ ಹರಿಜನ, ಯಮನೂರಪ್ಪ ಮಾದರ, ದುರಗವ್ವ ಮಾದರ, ಯಲ್ಲಪ್ಪ ಛಲವಾದಿ, ಹನಮವ್ವ ಹರಿಜನ, ಶರಣಪ್ಪ ಮಾದರ, ಹುಲಿಗೆವ್ವ ಮಾದರ ಇದ್ದರು.