ಜಿಲ್ಲೆ

ಗಾಂಜಾ ಮಾರುತ್ತಿದ್ದ ಇಬ್ಬರ ಬಂಧನ

ಮಂಗಳೂರು: ನಗರದ ಹೊರವಲಯದ ಪಿಲಿಕುಳ ದೂರದರ್ಶನ ಕೇಂದ್ರದ ಮುಂಭಾಗದ ಗೇಟ್ ಬಳಿ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಇಬ್ಬರನ್ನು ಮಂಗಳೂರು ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.

ಮೂಡ ಜೋಡುಮಾರ್ಗ ಗೂಡಿನಬಳಿ ನಿವಾಸಿಗಳಾದ ಮೊಹಮ್ಮದ್ ಆಸ್ೀ(34) ಮತ್ತು ನಿಯಾಜ್ ಎನ್.ಎ.(40) ಬಂಧಿತರು. ಇವರು ಜ.2ರಂದು ಸಾರ್ವಜನಿಕರಿಗೆ, ಕಾಲೇಜು ವಿದ್ಯಾರ್ಥಿಗಳಿಗೆ ಗಾಂಜಾ ಮಾರಾಟ ಮಾಡುತ್ತಿದ್ದರು. ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿ 20 ಸಾವಿರ ರೂ. ಮೌಲ್ಯದ 958 ಗ್ರಾಂ ಗಾಂಜಾ, ಮೊಬೈಲ್ ೆನ್‌ಗಳನ್ನು ವಶಪಡಿಸಿಕೊಂಡಿದ್ದಾರೆ.

ನಗರ ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ಮಾರ್ಗದರ್ಶನದಂತೆ ಡಿಸಿಪಿಗಳಾದ ಸಿದ್ಧಾರ್ಥ ಗೋಯಲ್, ಕೆ.ರವಿಶಂಕರ್ ನಿರ್ದೇಶನದಂತೆ ದಕ್ಷಿಣ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಧನ್ಯ ಎನ್.ನಾಯಕ್ ನೇತೃತ್ವದಲ್ಲಿ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣಾ ನಿರೀಕ್ಷಕ ಕೆ.ಆರ್.ಶಿವಕುಮಾರ್, ಪಿಎಸ್‌ಐ ಅರುಣ್ ಕುಮಾರ್ ಡಿ. ಮತ್ತು ಪಿಎಸ್‌ಐ ಪುನೀತ್, ಸಿಬ್ಬಂದಿ ಸಾಜುನಾಯರ್, ಮಹೇಶ್, ಅಕ್ಕರ್ ಮತ್ತು ತಿರುಮಲೇಶ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದಾರೆ.