ಕಾಪು ಲೈಟ್‌ಹೌಸ್ ಬಳಿ ಸಮುದ್ರದ ಅಲೆಗಳ ಅಬ್ಬರ ಜೋರಾಗಿ ನೀರು ಉಕ್ಕೇರಿ ತೀರಕ್ಕೆ ಅಪ್ಪಳಿಸುತ್ತಿದೆ 
ಜಿಲ್ಲೆ

ಗಾಳಿಯ ಅಬ್ಬರಕ್ಕೆ ಕಡಲು ಪ್ರಕ್ಷುಬ್ಧ

ಗಂಗೊಳ್ಳಿ: ಕೆಲದಿನಗಳಿಂದ ಸುರಿಯುತ್ತಿರುವ ಮಳೆ ಕಡಿಮೆಯಾಗಿ ಬಿಸಿಲಿನ ವಾತಾವರಣವಿದ್ದರೂ, ಗಾಳಿಯ ಅಬ್ಬರದಿಂದ ಕಡಲ್ಕೊರೆತ ತೀವ್ರಗೊಂಡಿದೆ.

ಗಂಗೊಳ್ಳಿ ಲೈಟ್‌ಹೌಸ್ ಸಮೀಪದ ಮಡಿ ಎಂಬಲ್ಲಿ ಕಡಲಿನ ಅಲೆಗಳು ಮುಂದೊತ್ತಿ ಬಂದು ತೀರ ಪ್ರದೇಶ ಕಬಳಿಸುತ್ತಿದ್ದು, ಸಮೀಪದಲ್ಲಿರುವ ರಸ್ತೆಗೆ ಹಾಗೂ ತೆಂಗಿನಮರಗಳು ಕಡಲ ಪಾಲಾಗುವ ಅಪಾಯಕ್ಕೊಳಗಾಗಿದೆ. ದೋಣಿಗಳು ಕಡಲಪಾಲಾಗುವ ಭೀತಿ ಎದುರಾಗಿದ್ದು, ಸುರಕ್ಷಿತ ಸ್ಥಳಗಳಿಗೆ ಸಾಗಿಸಲಾಗುತ್ತಿದೆ. ಮೂರ್ನಾಲ್ಕು ವರ್ಷಗಳಿಂದ ಲೈಟ್‌ಹೌಸ್ ಪ್ರದೇಶದಲ್ಲಿ ಮಳೆಗಾಲದಲ್ಲಿ ಕಡಲ್ಕೊರೆತ ತಡೆಯಲು ಶಾಶ್ವತ ಯೋಜನೆ ರೂಪಿಸುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ. ಎರಡು ವರ್ಷಗಳ ಹಿಂದೆ ಅಪಾರ ಆಸ್ತಿಪಾಸ್ತಿ ತನ್ನ ಒಡಲಿಗೆ ಸೇರಿಸಿಕೊಂಡಿದ್ದ ಸಮುದ್ರದ ಅಲೆಗಳು ಈ ಬಾರಿ ಮತ್ತೆ ಮುನ್ನುಗ್ಗಿ ಬರುತ್ತಿವೆ. ಹೀಗಾಗಿ ಶೀಘ್ರ ಕಡಲ್ಕೊರೆತ ತಡೆಗೋಡೆ ರಚನೆ ಮಾಡಬೇಕು ಎಂದು ಸಚಿವರು ಹಾಗೂ ಇಲಾಖೆ ಅಧಿಕಾರಿಗಳನ್ನು ತೀರ ಪ್ರದೇಶದ ನಿವಾಸಿಗಳು ಒತ್ತಾಯಿಸಿದ್ದಾರೆ.