ಜಿಲ್ಲೆ

ತುಳು ಯಕ್ಷಗಾನ ಪ್ರಸಂಗ ಬಿಡುಗಡೆ

ಮಂಜೇಶ್ವರ: ಸಂಟಕ ನಿತಿನ್ ಕುವಾರ್ ತೆಂಕಕಾರಂದೂರು ಕಥಾ ಸಂಯೋಜನೆಯಲ್ಲಿ ಗಡಿನಾಡಿನ ಕವಿ ಯೋಗೀಶ ರಾವ್ ಚಿಗುರುಪಾದೆ ಪದ್ಯರಚಿಸಿರುವ ’ತುಲುನಾಡ ಸತ್ಯೊಲು ಕಾನದ ಕಟದೆರ್’ ಪ್ರಸಂಗ ಬಿಡುಗಡೆ ಹಾಗೂ ಪ್ರದರ್ಶನ ಇತ್ತೀಚೆಗೆ ಬಂಟ್ವಾಳದ ಬಿ.ಸಿ.ರೋಡಿನಲ್ಲಿ ಜರುಗಿತು.

ಕರ್ನಾಟಕ ರಾಜ್ಯ ಆದಿದ್ರಾವಿಡ ಸವಾಜ ಸೇವಾ ಸಂದ ದಕ್ಷಿಣ ಜಿಲ್ಲಾ ಟಕ ಪ್ರದರ್ಶನ ಆಯೋಜಿಸಿತ್ತು. ಎರಡು ಸಾವಿರಕ್ಕೂ ಮಿಕ್ಕಿ ಪ್ರೇಕ್ಷಕರು ಪ್ರದರ್ಶನ ವೀಕ್ಷಿಸಿದರು. ಯೋಗೀಶ ರಾವ್ ಚಿಗುರುಪಾದೆ, ನಿತಿನ್ ಕುವಾರ್ ತೆಂಕಕಾರಂದೂರು, ಭಾಗವತ ಚಂದ್ರಶೇಖರ ಕಕ್ಕೆಪದವು, ಗೋಪಾಲ್ ಧರ್ಮಸ್ಥಳ, ಕಲಾವಿದ ಕಿರಣ್ ಕೊಂಚಾಡಿ, ಮನೋಜ್ ವೇಣೂರು, ಉಪವಲಯ ಅರಣ್ಯಾಧಿಕಾರಿ ಕಮಲಾ ಉಜಿರೆ ಅವರನ್ನು ಸನ್ಮಾನಿಸಲಾಯಿತು.