ಮಧುಗಿರಿ: ಮನೆ ಪಾಠ ಹೇಳಿಕೊಡುವ ನೆಪದಲ್ಲಿ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯವೆಸಗಿದವನ ವಿರುದ್ಧ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಬಡವನಹಳ್ಳಿ ಠಾಣೆಯಲ್ಲಿ ದೂರು ದಾಖಲಿಸಿದೆ.
ಎಂ.ಎಸ್.ಗೊಲ್ಲಹಳ್ಳಿಯ ಬಾಲಕಿಯನ್ನು ಅನಾರೋಗ್ಯದ ಹಿನ್ನೆಲೆಯಲ್ಲಿ ಬಾಲಕಿ ತಾಯಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದಾಗ ಆಕೆ ಗಭಿರ್ಣಿಯಾಗಿರುವುದು ಗೊತ್ತಾಗಿದೆ. ಇದನ್ನೂ ಓದಿರಿ ಸಮವಸ್ತ್ರದಲ್ಲೇ ಹೊಟ್ಟೆಗೆ ಎಣ್ಣೆ ಇಳಿಸಿದ ಪೊಲೀಸ್ ಸಿಬ್ಬಂದಿ! ಪ್ರಶ್ನಿಸಿದ್ದಕ್ಕೆ ಖಾಕಿ ದೌರ್ಜನ್ಯ?
ಬಾಲಕಿಯ ಮನೆಗೆ ಸಿಡಿಪಿಒ ಅನಿತಾ ಭೇಟಿ ನೀಡಿ ಬಾಲಕಿ ಜತೆ ಸಮಾಲೋಚಿಸಿದಾಗ 5 ತಿಂಗಳ ಹಿಂದೆ ಮನೆ ಪಾಠ ಹೇಳಿಕೊಡಲು ಬರುತ್ತಿದ್ದ ಸಂಜೀಪುರದ ರಂಗಯ್ಯ ಎಂಬಾತ ಮನೆಯಲ್ಲಿ ಯಾರೂ ಇಲ್ಲದಿದ್ದಾಗ ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾಗಿ ಬಾಲಕಿ ಮಾಹಿತಿ ನೀಡಿದ್ದಾಳೆ.
ರಂಗಯ್ಯನ ವಿರುದ್ಧ ಮಕ್ಕಳ ಲೈಂಗಿಕ ದೌರ್ಜನ್ಯ ಕಾಯ್ದೆ ಅಡಿಯಲ್ಲಿ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.