ಜಿಲ್ಲೆ

Truck Overturned ಹೊನ್ನಾವರ ಸುಳಿಮುರ್ಕಿ ಬಳಿ ಟ್ರಕ್‌ ಪಲ್ಟಿಯಾಗಿ 2 ಜನ ಸಾವು

Uttara Kannada - Subash Hegde

ಹೊನ್ನಾವರ: ಲಾರಿಯು ಪಲ್ಟಿಯಾಗಿ (Truck Overturned) ಬಿಹಾರ ರಾಜ್ಯದ ಇಬ್ಬರು ಮೃತ ‌ಪಟ್ಟಿರುವ ಘಟನೆ ಭಾನುವಾರ ತಡರಾತ್ರಿ ತಾಲೂಕಿನ ಗೇರುಸೊಪ್ಪ ಸಮೀಪದ ಬೆಂಗಳೂರು-ಹೊನ್ನಾವರ ಹೆದ್ದಾರಿಯ ಸುಳಿಮುರ್ಖಿ ತಿರುವಿನಲ್ಲಿ ನಡೆದಿದೆ.

ಕಬ್ಬಿಣದ ಆಟದ ಸಾಮಾನುಗಳನ್ನು ತುಂಬಿಕೊಂಡು ಸಾಗುತ್ತಿದ್ದ  ಲಾರಿಯು ಸಾಮಾನುಗಳನ್ನು ತುಂಬಿಕೊಂಡು ಹುಬ್ಬಳ್ಳಿಯಿಂದ ಕುಮಟಾಕ್ಕೆ ಬರುತ್ತಿತ್ತು. ಮಾವಿನಗುಂಡಿ ಮತ್ತು ಗೇರುಸೊಪ್ಪ ಮಧ್ಯೆ ಇರುವ ಅಪಾಯಕಾರಿ ಸುಳಿಮುರ್ಕಿ ತಿರುವಿನಲ್ಲಿ ರಾತ್ರಿ ಎರಡು ಗಂಟೆ ಸುಮಾರಿಗೆ ಲಾರಿಯು ಚಾಲಕನ ನಿಯಂತ್ರಣ ತಪ್ಪಿ ಮಗುಚಿ ಬಿದ್ದಿದೆ.

Truck Overturned

ಲಾರಿಯಲ್ಲಿ ಒಟ್ಟೂ ಆರು ಜನರಿದ್ದರು. ಇಬ್ಬರು ಮ್ರತಪಟ್ಟಿದ್ದು, ಮೂರು ಜನ ಗಾಯಗೊಂಡಿದ್ದಾರೆ. ಗಾಯಗೊಂಡಿರುವ ಬಿಹಾರ ರಾಜ್ಯದ ನಳಂದ ಜಿಲ್ಲೆಯ ಸಜ್ಜನ ಕುಮಾರ್ ಗಯಾ ಜಿಲ್ಲೆಯ ಗಣವ್ರಿ ಪಾಟ್ನಾ ಜಿಲ್ಲೆಯ ಪಪ್ಪು ಕುಮಾರ್ ಹೊನ್ನಾವರ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇದನ್ನೂ ಓದಿ: https://www.vijayavani.net/man-who-beat-mother-in-law-to-death-gets-life-sentencehttps://www.vijayavani.net/man-who-beat-mother-in-law-to-death-gets-life-sentencehttps://youtu.be/QeYdfRLBdws