ಶೌಕತ್  
ಜಿಲ್ಲೆ

ಟ್ರಕ್ ಚಾಲಕನ ಪುತ್ರನಿಗೆ 345ನೇ ರ‌್ಯಾಂಕ್

Karthika K.S

ಕಾರ್ಕಳ: 2024ನೇ ಸಾಲಿನ ಲೋಕಸೇವಾ ಆಯೋಗ (ಯುಪಿಎಸ್‌ಸಿ) ಪರೀಕ್ಷೆಯಲ್ಲಿ ಕಾರ್ಕಳ ಸಾಲ್ಮರದ ಟ್ರಕ್ ಚಾಲಕನ ಪುತ್ರ ಶೌಕತ್ ಅಝೀಮ್ 345ನೇ ರ‌್ಯಾಂಕ್‌ನೊಂದಿಗೆ ತೇರ್ಗಡೆಯಾಗುವ ಮೂಲಕ ತಾಲೂಕಿಗೆ ಕೀರ್ತಿ ತಂದಿದ್ದಾರೆ.

ಶೇಖ್ ಅಬ್ದುಲ್ಲ ಮತ್ತು ಮೈಮುನಾ ದಂಪತಿಯ ಪುತ್ರ ಶೌಕತ್ ಅಝೀಮ್ 8 ಬಾರಿ ಯುಪಿಎಸ್ಸಿ ಪರೀಕ್ಷೆ ಬರೆದಿದ್ದು, 9ನೇ ಪ್ರಯತ್ನದಲ್ಲಿ ಯಶಸ್ವಿಯಾಗಿದ್ದಾರೆ. ಶೌಕತ್ ತಂದೆ ಟ್ರಕ್ ಚಾಲಕರಾಗಿದ್ದು, ತಾಯಿ ಬೀಡಿಕಟ್ಟುವ ಕಾಯಕ ಮಾಡಿಕೊಂಡಿದ್ದಾರೆ. ಶೌಕತ್ 1ರಿಂದ 5ನೇ ತರಗತಿ ತನಕ ಕಾರ್ಕಳ ಸರ್ಕಾರಿ ಉರ್ದು ಶಾಲೆಯಲ್ಲಿ, 5ರಿಂದ 7 ತರಗತಿ ತನಕ ಎಸ್‌ವಿಟಿ ಶಾಲೆಯಲ್ಲಿ ಶಿಕ್ಷಣ ಪೂರ್ಣಗೊಳಿಸಿದ್ದಾರೆ. ಪ್ರೌಢಶಿಕ್ಷಣವನ್ನು ಭುವನೇಂದ್ರ ಶಾಲೆಯಲ್ಲಿ ಪೂರೈಸಿದ್ದು, ಪಿಯುಸಿಯನ್ನು ಕಾರ್ಕಳದ ಕೆಎಂಇಎಸ್‌ನಲ್ಲಿ ಮುಗಿಸಿದ್ದಾರೆ. ಬಳಿಕ ಮೂಡಬಿದಿರೆಯ ಎಂಐಟಿಇ ಕಾಲೇಜಿನಲ್ಲಿ ಇಂಜಿನಿಯರಿಂಗ್ ಶಿಕ್ಷಣ ಪೂರೈಸಿದ್ದಾರೆ. ಪ್ರಸ್ತುತ ಪುಣೆಯಲ್ಲಿರುವ ರಕ್ಷಣಾ ಇಲಾಖೆಯ ಅಕೌಂಟಿಂಗ್ ಘಟಕದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.