ಜಿಲ್ಲೆ

ಗಂಗೊಳ್ಳಿಯ ಜಟ್ಟಿಗೇಶ್ವರ ತಂಡಕ್ಕೆ ಟ್ರೋಫಿ

ಇಂದಿರಾ ಎನ್ ಕೆ

ಕುಂದಾಪುರ: ಕಠಿಣ ದುಡಿಮೆಯೇ ಯಶಸ್ಸಿನ ಹಾಗೂ ಅಭಿವೃದ್ಧಿಯ ಗುಟ್ಟು ಎನ್ನುವುದನ್ನು ಸಮಾಜಕ್ಕೆ ತೋರಿಸಿಕೊಟ್ಟಿರುವವರು ಕೊಂಕಣಿ ಖಾರ್ವಿ ಸಮಾಜದ ಬಂಧುಗಳು ಎಂದು ಕುಂದಾಪುರ ಪುರಸಭೆ ಅಧ್ಯಕ್ಷ ಮೋಹನ್‌ದಾಸ್ ಶೆಣೈ ನುಡಿದರು. ಕುಂದಾಪುರ ಖಾರ್ವಿಕೇರಿಯಲ್ಲಿ ಕುಂದಾಪುರದ ಕೆ.ಕೆ.ಫ್ರೆಂಡ್ಸ್ ಆಶ್ರಯದಲ್ಲಿ ನಡೆದ ಹೊನಲು ಬೆಳಕಿನ ಅಖಿಲ ಕರ್ನಾಟಕ ಕೊಂಕಣಿ ಖಾರ್ವಿ ಸವಾಜದ ಆಹ್ವಾನಿತ ತಂಡಗಳ ಪ್ರೊ ಕಬಡ್ಡಿ ಪಂದ್ಯಾಟ 2025ರ ಸವಾರೋಪ ಸವಾರಂಭದಲ್ಲಿ ಮಾತನಾಡಿದರು. ಪುರಸಭೆ ಸದಸ್ಯ ಎಚ್.ಎನ್.ಚಂದ್ರಶೇಖರ ಖಾರ್ವಿ ಮಾತನಾಡಿದರು. ನಟ, ನಿರ್ದೇಶಕ ರಾಜ್ ಬಿ. ಶೆಟ್ಟಿ, ಸಾವಾಜಿಕ ಕಾರ್ಯಕರ್ತ ಸುಕೇಶ್ ಎಸ್. ನಾಯ್ಕ ಹಾಗೂ ಮುಳುಗು ತಜ್ಞ ದಿನೇಶ್ ಖಾರ್ವಿ, ಮುಕುಂದ ಖಾರ್ವಿ ಅವರನ್ನು ಸನ್ಮಾನಿಸಲಾಯಿತು. ವಿದ್ಯಾರಂಗ ಮಿತ್ರ ಮಂಡಳಿ ಅಧ್ಯಕ್ಷ ದಾಮೋದರ ಖಾರ್ವಿ, ಆಹಾರ ನಿರೀಕ್ಷಕ ಎಚ್.ಎಸ್.ಸುರೇಶ್, ವಕೀಲ ಟಿ.ಜಯಚಂದ್ರ ಶೆಟ್ಟಿ, ಗಂಗೊಳ್ಳಿ ಹಸಿ ಮೀನು ವ್ಯಾಪಾರಸ್ಥರ ಸಂ ಅಧ್ಯಕ್ಷ ರಾವೇಂದ್ರ ಖಾರ್ವಿ, ಪುರಸಭಾ ಸದಸ್ಯರಾದ ಸಂದೀಪ್ ಖಾರ್ವಿ, ರಾವೇಂದ್ರ ಖಾರ್ವಿ, ಕೆ.ಕೆ.ಫ್ರೆಂಡ್ಸ್ ಅಧ್ಯಕ್ಷ ಸಂದೀಪ್ ಎಸ್.ಎಸ್, ಉಪಾಧ್ಯಕ್ಷ ಸುಧೀರ್ ನಾಯ್ಕ, ಕೋಶಾಧಿಕಾರಿ ವಿಜಯ್ ನಾಯ್ಕ ಇದ್ದರು. ರಾಜೇಶ್ ಕೆ.ಕೆ.ಎಫ್ ಸನ್ಮಾನ ಪತ್ರ ವಾಚಿಸಿದರು. ಕೆ.ಕೆ.ಫ್ರೆಂಡ್ಸ್ ಕಾರ್ಯದರ್ಶಿ ಗಣೇಶ್ ನಾಯ್ಕ ವಂದಿಸಿದರು. ರಾಜೇಶ್ ಕುಂದಾಪುರ ನಿರೂಪಿಸಿದರು.

ಫಲಿತಾಂಶ

ಗಂಗೊಳ್ಳಿಯ ಜಟ್ಟಿಗೇಶ್ವರ ತಂಡ ಪ್ರಥಮ ಸ್ಥಾನದೊಂದಿಗೆ 1,11,111 ರೂ. ಹಾಗೂ ಟ್ರೋಫಿ, ಸಹರಾ ಗಂಗೊಳ್ಳಿ ತಂಡ ದ್ವಿತೀಯ ಸ್ಥಾನದೊಂದಿಗೆ 66,666 ರೂ. ನಗದು ಹಾಗೂ ಟ್ರೋಫಿ ಪಡೆದುಕೊಂಡಿತು. ಉತ್ತಮ ಸವ್ಯಸಾಚಿಯಾಗಿ ಸಹರಾ ತಂಡದ ಪ್ರಜ್ವಲ್, ಉತ್ತಮ ರೈಡರ್ ಆಗಿ ಜಟ್ಟಿಗೇಶ್ವರ ತಂಡದ ಮಣಿ, ಉತ್ತಮ ಡಿೆಂಡರ್ ಆಗಿ ಜಟ್ಟಿಗೇಶ್ವರ ತಂಡದ ಶೋಧನ್ ಹಾಗೂ ಶಿಸ್ತಿನ ತಂಡವಾಗಿ ಭಟ್ಕಳದ ಸ್ವಸ್ತಿಕ್ ಬ್ರದರ್ಸ್ ತಂಡ ಪ್ರಶಸ್ತಿ ಪಡೆದುಕೊಂಡಿತು.