ಜಿಲ್ಲೆ

ಸಾಣೂರು ಯುವಕ ಮಂಡಲ ಮಾದರಿ

ಇಂದಿರಾ ಎನ್ ಕೆ

ವಿಜಯವಾಣಿ ಸುದ್ದಿಜಾಲ ಕಾರ್ಕಳ

ಸಾಮಾಜಿಕ ಶೈಕ್ಷಣಿಕ ಹಾಗೂ ಧಾರ್ಮಿಕ ಸೇವಾ ಕಾರ್ಯಗಳ ಮೂಲಕ ಸಾಣೂರು ಯುವಕ ಮಂಡಲ ರಾಜ್ಯಕ್ಕೆ ಮಾದರಿಯಾಗಿದೆ. ಈ ಯುವಕ ಸಂಘಟನೆ ಸಮಾಜಮುಖಿ ಚಿಂತನೆಯಲ್ಲಿ ಸೇವೆ ನೀಡುತ್ತಿರುವುದು ಶ್ಲಾಘನಾರ್ಹ ಎಂದು ಸಾಮಾಜಿಕ ಕಾರ್ಯಕರ್ತ ಶ್ರೀಕಾಂತ್ ಶೆಟ್ಟಿ ಹೇಳಿದರು.

ಸಾಣೂರು ಪಠೇಲ್ ಮುದ್ದಣ್ಣ ಶೆಟ್ಟಿ ಸ್ಮಾರಕ ಜ್ಯೋತಿ ಕಲಾ ಮಂಟಪದಲ್ಲಿ ಶನಿವಾರ ಸಾಣೂರು ಯುವಕ ಮಂಡಲದ 71ನೇ ವಾರ್ಷಿಕೋತ್ಸವ ಹಾಗೂ ಶ್ರೀವಾಣಿ ಯಕ್ಷಗಾನ ಸಭಾ ಯುವಕ ಮಂಡಲದ 54ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಮಾತನಾಡಿದರು.

ಉದ್ಘಾಟಿಸಿದರು. ಮಂಗಳೂರು ಎಂಸಿಎಫ್‌ನ ಜಂಟಿ ಪ್ರಧಾನ ಪ್ರಬಂಧಕ ಕೆ.ವಿ.ಕೀರ್ತನ್ ಕುಮಾರ್ ಅಧ್ಯಕ್ಷತೆ ವಹಿಸಿದರು. ಸಾಣೂರು ಗ್ರಾಪಂ ಅಧ್ಯಕ್ಷ ಯುವರಾಜ ಜೈನ್, ಪ್ರಮುಖರಾದ ಬೋಳ ಪ್ರಶಾಂತ್ ಕಾಮತ್, ವಸಂತ ಎಂ., ಶಶಿಕಲಾ ಕೆ.ಹೆಗ್ಡೆ, ಶ್ರೀರಾಮ್ ಭಟ್, ದೇವಿಪ್ರಸಾದ್ ಶೆಟ್ಟಿ, ಮಹೇಶ್ ಕುಮಾರ್, ಜೀವನ್ ರಾವ್, ವಿಘ್ನೇಶ್ ರಾವ್, ಮುರುಳಿಧರ್ ಸುವರ್ಣ, ಚಂದ್ರಹಾಸ ಪೂಜಾರಿ, ಜಯ ಶೆಟ್ಟಿಗಾರ, ಸುದರ್ಶನ್ ನಾಯಕ್, ಪ್ರಸಾದ್ ಪೂಜಾರಿ ಉಪಸ್ಥಿತರಿದ್ದರು. ಗುರುಪ್ರಸಾದ್ ಶೆಟ್ಟಿ ಸ್ವಾಗತಿಸಿದರು. ಪ್ರಕಾಶ್ ರಾವ್ ವರದಿ ವಾಚಿಸಿದರು. ಪ್ರಜ್ವಲ್ ಶೆಟ್ಟಿ ಸಂದೇಶ ವಾಚಿಸಿದರು. ಮೋಹನ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಉಮೇಶ್ ಮಿಜಾರ್ ರಚಿಸಿದ ತುಳು ಹಾಸ್ಯ ನಾಟಕ ಉಲಾ ಪಿದಾಯಿ ಪ್ರದರ್ಶನಗೊಂಡಿತು.

ವಿದ್ಯಾರ್ಥಿಗಳಿಗೆ ನೆರವು, ಅಭಿನಂದನೆ

ಉದ್ಯಮಿ ಶಶಿಧರ್ ಶೆಟ್ಟಿ ಅವರು ಸಾಣೂರು ಬಡ ಕುಟುಂಬಗಳಿಗೆ ನೆರವಾಗುವ ಮೂಲಕ ಆರೋಗ್ಯ ಚಾಲನೆ ನೀಡಿದರು. ಶಾಶ್ವತ ವಿದ್ಯಾನಿಧಿ ಶೈಕ್ಷಣಿಕ ಯೋಜನೆ ಅಡಿ ಸುಮಾರು 97,000 ರೂ.ವನ್ನು ಗ್ರಾಮದ ಸಾಧಕ ವಿದ್ಯಾರ್ಥಿಗಳಿಗೆ ನೀಡಲಾಯಿತು. ಶೌರ್ಯ ವಿಪತ್ತು ಘಟಕ ಸಾಣೂರು, ಆಂಜನೇಯ ಭಜನಾ ಮಂಡಳಿ ಸಾಣೂರು, ಸ್ವಚ್ಛ ಕಾರ್ಕಳ ಬ್ರಿಗೇಡ್ ತಂಡಗಳಿಗೆ ಗೌರವ, ಇರ್ವತ್ತೂರು ಶಿವಣ್ಣ ಶೆಟ್ಟಿ ಅವರಿಗೆ ಯಕ್ಷಶ್ರೀ ಸಂಸ್ಮರಣ ಪ್ರಶಸ್ತಿ ನೀಡಿ ಗೌರವಿಸಲಾಯಿತು.