ಜಿಲ್ಲೆ

ಯಕ್ಷಗಾನ ಕಲಾವಿದ ಸುಬ್ರಾಯ ಹೊಳ್ಳರಿಗೆ ಸನ್ಮಾನ

ಮೂಡುಬಿದಿರೆ: ತೆಂಕುತಿಟ್ಟು ಯಕ್ಷಗಾನ ರಂಗದಲ್ಲಿ 42 ವರ್ಷ ಸೇವಾನುಭವದೊಂದಿಗೆ ಅರವತ್ತರ ಸಂಭ್ರಮದಲ್ಲಿರುವ ಸುಬ್ರಾಯ ಹೊಳ್ಳ ಅವರನ್ನು ಅಲಂಗಾರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ಪಾವಂಜೆ ಮೇಳದ ಬಯಲಾಟದ ರಂಗಸ್ಥಳದಲ್ಲಿ ಶನಿವಾರ ಯಕ್ಷಧ್ರುವ ಪಟ್ಲ ಫೌಂಡೇಶನ್ ಮೂಡುಬಿದಿರೆ ಘಟಕದ 9ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಸನ್ಮಾನಿಸಲಾಯಿತು.

ಪಟ್ಲ ಫೌಂಡೇಶನ್ ಕೇಂದ್ರೀಯ ಸಮಿತಿ ಸ್ಥಾಪಕಾಧ್ಯಕ್ಷ ಪಟ್ಲ ಸತೀಶ ಶೆಟ್ಟಿ, ಮೂಡುಬಿದಿರೆ ಘಟಕ ಗೌರವಾಧ್ಯಕ್ಷ ಕೆ.ಶ್ರೀಪತಿ ಭಟ್, ಅಧ್ಯಕ್ಷ ದಿವಾಕರ ಶೆಟ್ಟಿ ಖಂಡಿಗ ಬೆಳುವಾಯಿ, ಉಪಾಧ್ಯಕ್ಷ ಸುಬ್ರಹ್ಮಣ್ಯ ಭಟ್, ಕೇಂದ್ರೀಯ ಸಮಿತಿ ಟ್ರಸ್ಟಿ ಪ್ರೇಮನಾಥ ಮಾರ್ಲ, ಗಣ್ಯರಾದ ಉದ್ಯಮಿ ತಿಮ್ಮಯ್ಯ ಶೆಟ್ಟಿ, ಜಗದೀಶ ಅಧಿಕಾರಿ, ಸುದರ್ಶನ ಎಂ. ಸನ್ಮಾನಿಸಿದರು.

ಶಾಂತರಾಮ ಕುಡ್ವ ಅಭಿನಂದನಾ ಭಾಷಣದಲ್ಲಿ ಪುತ್ತೂರು, ಕಟೀಲು, ಕದ್ರಿ, ಬಪ್ಪನಾಡು, ಎಡನೀರು, ಹೊಸನಗರ, ಹನುಮಗಿರಿ, ಹೊಸನಗರ, ಧರ್ಮಸ್ಥಳ ಮತ್ತು ಈಗ ಪಾವಂಜೆ ಮೇಳದ ಕಲಾವಿದರಾಗಿ ಸೇವೆ ಸಲ್ಲಿಸುತ್ತಿರುವ ಸುಬ್ರಾಯ ಹೊಳ್ಳ ಅವರು ಸವ್ಯಸಾಚಿ ಕಲಾವಿದರೆಂದೇ ಗುರುತಿಸಲ್ಪಡುತ್ತಿರುವವರು ಎಂದರು.

ಕೇಂದ್ರೀಯ ಸಮಿತಿ ಟ್ರಸ್ಟಿಯಾಗಿ ಆಯ್ಕೆಯಾದ ದಿವಾಕರ ಶೆಟ್ಟಿ ಅವರನ್ನು ಅಭಿನಂದಿಸಲಾಯಿತು. ಕಾರ್ಯದರ್ಶಿ ಅರುಣ್ ಸಮಾಜ ಮಂದಿರ, ಕೋಶಾಧಿಕಾರಿ ಸದಾಶಿವ ಶೆಟ್ಟಿಗಾರ್, ಸಂಘಟನಾ ಕಾರ್ಯದರ್ಶಿಗಳಾದ ಮನೋಜ್‌ಕುಮಾರ್ ಶೆಟ್ಟಿ, ಪುನೀತ್ ಕುಮಾರ್ ಕಟ್ಟೆಮಾರ್ ಮೊದಲಾದ ಪದಾಧಿಕಾರಿಗಳು, ಸದಸ್ಯರಿದ್ದರು.

ಸಂಚಾಲಕ ರವಿಪ್ರಸಾದ್ ಕೆ.ಶೆಟ್ಟಿ ಸ್ವಾಗತಿಸಿ, ಉಪಾಧ್ಯಕ್ಷ ಸದಾಶಿವ ನೆಲ್ಲಿಮಾರು ವಂದಿಸಿದರು. ಪಾವಂಜೆ ಮೇಳದವರು ‘ಸಹಸ್ರ ಕವಚ ಮೋಕ್ಷ’ ಯಕ್ಷಗಾನ ಪ್ರದರ್ಶಿಸಿದರು.